ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!
ಪ್ರತಿ ವರ್ಷ, ಇಡೀ ಪ್ರಪಂಚದಾದ್ಯಂತ ಮಾನವರು, ಒಂದು ಲಕ್ಷ ಮೆಟ್ರಿಕ್ ಟನ್ ಅಷ್ಟು ಕೆಫೀನ್ ಅನ್ನು, ಬಳಸುತ್ತಾರೆ, ಇದರ ತೂಕ,
14 ಎಪಿಲ್ ಟವರ್ ಗಳಿಗೆ ಸಮ ಆಗಿರುತ್ತೆ,
ಈ ಕೆಫೀನ್ ಅನ್ನು ಹಲವಾರು ವಿಧದಲ್ಲಿ ಬಳಸಲಾಗುತ್ತದೆ, ಅವುಗಳೆಂದರೆ, ಕಾಪಿ, ಟೀ, ಕೆಲವು ಸೋಡಾಗಳಲ್ಲಿ,, ಚಾಕ್ಲೇಟ್ ಗಳಲ್ಲಿ,ಹಾಗೂ ಐಸ್ ಕ್ರೀಮ್ ಗಳಲ್ಲಿ,
ಈ ಕೆಫೀನ್, ನಾವು ಹೆಚ್ಚು ಚಟುವಟಿಕೆಯಿಂದ ಇರಲು, ನಮಗೆ ಸಹಾಯ ಮಾಡುತ್ತದೆ, ಆದ್ರೆ ಇದು ಕೆಲವು ಬಾರಿ ಹೆಚ್ಚಿನ ಬ್ಲಡ್ ಪ್ರೆಶರ್ ಗೆ ಕಾರಣ ಆಗುತ್ತೆ ಈಗಾಗಿ ಆತಂಕದ ಭಯ ಶುರು ಆಗಬಹುದು
ಆದ್ರೂ ಇದು ಪ್ರಪಂಚದಲ್ಲಿಯೇ ಅತಿ ಹೆಚ್ಚಾಗಿ ಬಳಸುವ ಪಾನೀಯಗಳಲ್ಲಿ ಒಂದು
ಆದ್ರೆ ಇದು ಹೇಗೆ ಮಾನವರನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ
ಇದು ಕೆಲವು ಎಲೆ ಮತ್ತು ಬೀಜಗಳಲ್ಲಿ ಸಿಗುತ್ತದೆ ಇದು ಕೀಟಗಳಿಗೆ ವಿಷಕಾರಿಯಗಿದೆ
ಆದ್ರೆ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಇದು ಅವುಗಳು ಹೀರುವ ಹೂ ಗಳಲ್ಲಿ ಕಂಡು ಬರುತ್ತದೆ ಇದು ಅವುಗಳಿಗೆ ಹೂ ಗಳ ಸ್ಥಳವನ್ನು ನೆನಪಿಡಲು ಮತ್ತೆ ಪುನಃ ಬರಲು ಸಹಾಯ ಮಾಡುತ್ತದೆ
ಇದು ಮಾನವರಲ್ಲಿ ಸೆಂಟ್ರಲ್ ನರ್ವಸ್ ಸಿಸ್ಟಂ ಅನ್ನು ಚುರುಕುಗೊಳಿಸುತ್ತದೆ
ಇದು ನಿದ್ದೆಯನ್ನು ತರುವ ಅಡೆನೋಸಿನ್ ಕಣಗಳನ್ನು ಬ್ಲಾಕ್ ಮಾಡುವ ಮೂಲಕ ನಮ್ಮನ್ನು ಎಚ್ಚರ ಇರುವಂತೆ ಮಾಡುತ್ತದೆ
ನಮ್ ದೇಹಕ್ಕೆ ನಿರಂತರವಾಗಿ ಎನರ್ಜಿ ಸಪ್ಲೈ ನ ಅಗತ್ಯ ಇರುತ್ತದೆ ಇದು ಎಟಿಪಿ ಎಂಬ ಕಣಗಳು ಬ್ರೇಕ್ ಅಂದ್ರೆ ಹೊಡೆಯುವ ಮೂಲಕ ದೇಹಕ್ಕೆ ಎನರ್ಜಿ ದೊರಕುತ್ತದೆ
ಹಾಗೆ ಅಡೆನೋಸಿನ್
ಎಂಬ ಕಣಗಳು ಬಿಡುಗಡೆ ಆಗುತ್ತವೆ ನಿಮ್ಮ ಮಿದುಳಿನ ನ್ಯೂರಾನ್ ಗಳಲ್ಲಿ ಈ ಅಡೆನೋಸಿನ್ ಕಣಗಳ ಆಕಾರಕ್ಕೆ ತಕ್ಕ ಆಗೆ ಅವನ್ನು ರಿಸೀವ್ ಮಾಡಿಕೊಳ್ಳುವ ಕೆಲವು ರಿಸಿಪ್ಟಿರ್ ಇರುತ್ತವೆ
ಈ ರಿಸಿಪ್ಟಾರ್ ಗಳಲ್ಲಿ ಈ ಕಣಗಳು ಬಂದು ಕೂತರೆ ಆಗ ನಿದ್ದೆ ಬರುತ್ತದೆ ಅದೇ ಆ ನಿದ್ದೆ ತರುವ ಕಣಗಳ ಬದಲಿಗೆ ಕೆಫೀನ್ ನ ಕಣಗಳು ಬಂದು ಕೂತರೆ ನಿದ್ದೆ ಬರುವುದಿಲ್ಲ ಯಾಕಂದ್ರೆ ಈ ನಿದ್ದೆ ತರುವ ಕಣಗಳ ಆಕಾರದ ರೀತಿಯೇ ಈ ಕೆಫೀನ್ ಕಣಗಳು ಇರುತ್ತವೆ ಸೋ ಹೀಗಾಗಿ ನಿದ್ದೆ ಬರುವುದಿಲ್ಲ ಹಾಗೆ ಕೆಫೀನ್ ಅನ್ನು ಸೇವಿಸುವುದರಿಂದ ಡೋಪೇಮಿನ್ ಕಣಗಳು ಸಹ ರಿಸಿಪ್ಟರ್ ಗಳಲ್ಲಿ ಕರೆಕ್ಟ್ ಆಗಿ ಕೂರುತ್ತವೆ ಹೀಗಾಗಿ ಕಾಪಿ ಕುಡಿದಾಗ ಸ್ವಲ್ಪ ಎನರ್ಜಿ ಭಾವನೆ ಬರುತ್ತದೆ ಅದೇ ನಿದ್ದೆ ತರುವ ಅಡೆನೋಸಿನ್ ಕಣಗಳು ಏನಾದ್ರೂ ಮೈಂಡ್ ರಿಸಿಪ್ಟ್ ರ್ ಗಳಲ್ಲಿ ಕೂತರೆ ಡೋಪೇಮಿನ್ ಕಣಗಳು ಸರಿಯಾಗಿ ಕೂರಲು ಆಗುವುದಿಲ್ಲ ಹೀಗಾಗಿ ಎನರ್ಜಿ ಮತ್ತು ಸಂತೋಷ ಬಾರದೆ ಡಲ್ನೆಸ್ ಮತ್ತು ನಿದ್ದ ಬರುವ ರೀತಿ ಆಗುತ್ತದೆ
ಆದ್ರೆ ನೀವು ಅತೀ ಹೆಚ್ಚು ಕೆಫೀನ್ ಸೇವನೆ ಒಳ್ಳೆಯದಲ್ಲ ಇದರಿಂದ ನಿದ್ರಾಹೀನತೆ,ಆತಂಕ,ಹೃದಯ ಬಡಿತ ಹೆಚ್ಚಾಗುವಿಕೆ ಮತ್ತು ಬ್ಲಡ್ ಪ್ರೆಶರ್ ಜಾಸ್ತಿ ಆಗುವಿಕೆ ಉಂಟಾಗುತ್ತದೆ