ಸ್ಪರ್ಶ ಅಥವಾ ಟಚ್ ಫೀಲಿಂಗ್ ನಮ್ಮ ಮಿದುಳಿಗೆ ಹೇಗೆ ಗೊತ್ತಾಗುತ್ತದೆ

ಹಲೋ ಫ್ರೆಂಡ್ಸ್,ಈ ವಿಡಿಯೋದಲ್ಲಿ, ನಮ್ಮ ಸ್ಪರ್ಶದ ಅನುಭವ, ಹೇಗೆ ಕೆಲಸ ಮಾಡುತ್ತದೆ, ಎಂದು ವಿವರಿಲಾಗಿದೆ, ಸೋ ಕೊನೆವರೆಗೂ ನೋಡಿ 

ಸ್ಪರ್ಶವು, ಸೊಮಾಟೊಸೆನ್ಸರಿ ಸಿಸ್ಟ ನ ಒಂದು ಭಾಗವಾಗಿದೆ, ಈ ಸಿಸ್ಟಂ ಅನ್ನು ದೈಹಿಕ ಇಂದ್ರಿಯಗಳು, ಸ್ಪರ್ಶ ಅಥವಾ ಸ್ಪರ್ಶ ಗ್ರಹಿಕೆ ಎಂದೂ ಕರೆಯಲಾಗುತ್ತದೆ. ಅಂಗರಚನಾಶಾಸ್ತ್ರದಲ್ಲಿ ಹೇಳುವುದಾದರೆ, ಸೊಮಾಟೊಸೆನ್ಸರಿ ಸಿಸ್ಟಮ್ ಮಾನವರು ವಸ್ತುಗಳನ್ನು ಗುರುತಿಸಲು, ಸಂವೇದನಾ-ಮೋಟಾರ್ ಪ್ರತಿಕ್ರಿಯೆಯನ್ನು ಸೃಷ್ಟಿಸಲು, ಮತ್ತು ಸಾಮಾಜಿಕ ಸೂಚನೆಗಳನ್ನು ವಿನಿಮಯ ಮಾಡಿಕೊಳ್ಳಲು, ಸಹಾಯ ಮಾಡುವ ನರಕೋಶಗಳ ಜಾಲವಾಗಿದೆ.

ಹಾಗೆ, ಇನ್ನೊಂದು ಮುಕ್ಯವಾದ ಸಿಸ್ಟಂ ಆದ ಪ್ರೊಪ್ರಿಯೋಸೆಪ್ಷನ್ ಸಿಸ್ಟಂ ನಮ್ಮ ದೇಹದಲ್ಲಿನ ತಾಪಮಾನ, ನೋವೂ, ದೇಹದ ಪೊಸಿಷನ್, ಮತ್ತು ದೇಹದ ಅರಿವಿನ ಬಗ್ಗೆ ಮೈಂಡ್ ಗೆ ಸಿಗ್ನಲ್ ಕೊಡುತ್ತದೆ ,

ಉದಾರಣೆಗೆ, ಸ್ಟ್ರೆಚ್ ರೆಸಿಪ್ಟರ್, ಇವು ಸ್ನಾಯುಗಳಲ್ಲಿ ಇರುತ್ತವೆ, ಇವು ದೇಹದ ಪೊಸಿಷನ್ ಬಗ್ಗೆ ಮೈಂಡ್ ಗೆ ಸಿಗ್ನಲ್ ಕಲಿಸುತ್ತವೆ, 
ಕಣ್ಣುಗಳು ವಿಶುವಲ್ ಇನ್ಫಾರ್ಮೇಶನ್ ಅನ್ನು ಕಳಿಸುತ್ತದೆ, ಇನ್ನ ವೆಸ್ಟಬ್ಯುಲಿರ್ ಅಂಗಾಂಶಗಳು ಕಿವಿಯಲ್ಲಿ ಇರುತ್ತವೆ, ಇವು ದೇಹದ ರೋಟೇಷನ್ ಮತ್ತು ಸ್ಪೀಡ್ ಬಗ್ಗೆ ಮೈಂಡ್ ಗೆ ಮಾಹಿತಿ ಕೊಡುತ್ತವೆ, ಹೀಗೆ ಮೈಂಡ್ ಇವೆಲ್ಲಾ ಸಂದೇಶಗಳನ್ನು ತೆಗೆದುಕೊಂಡು, ಅದಕ್ಕೆ ತಕ್ಕಂತೆ ಕಾರ್ಯ ನಿರ್ವಹಿ ಸುತ್ತದೆ ,

ಈ ರೀತಿಯ ಸೆನ್ಸಾರ್ಗಳು ,ಪ್ರತಿ ಒಂದು ಸೆಂಟಿಮೀಟರ್ ಚೌಕಾಕಾರದಲ್ಲೀ ಹಂಡ್ರೆಡ್ ಕ್ಕಿಂತ ಹೆಚ್ಚಿರುತ್ತವೆ ,

ಅದ್ರಲ್ಲಿ ಕೆಲವು ಹೀಗಿವೆ, ಅವುಗಳೆಂದರೆ, 
ಮೆಕಾನೋರೆಸೆಪ್ಟರ್‌ಗಳು, ಇವು ಚರ್ಮದ ಮೆಲ್ವಾಗದಲ್ಲಿ ಇರುತ್ತವೆ, ಇವು ಚರ್ಮದ ಮೇಲೆ ಏನಾದರೂ ಸಣ್ಣ ವೈಬ್ರೇಶನ್ ಆದ್ರೂ, ಮತ್ತು ದೂಳು ಕುತರೂ, ಇವು ಜಾಗೃತ ಆಗಿ ಮೈಂಡ್ ಗೆ ಅದ್ರ ಬಗ್ಗೆ ಸಂದೇಶ ರವಾನೆ ಮಾಡುತ್ತವೆ, 

ಹಾಗೆ, ಚರ್ಮದ ಮೇಲಿರುವ ಥರ್ಮೋರ್ಸೆಪ್ಟರ್ಗಳು, ವಾತಾವರಣದ ಅನುಭವ ನೀಡುತ್ತವೆ, ಇವು ಕೂಡ ಚರ್ಮದ ಮೇಲ್ಬಾಗದಲ್ಲಿ ಇರುತ್ತವೆ ,

ಹಾಗೆ, ನಿಮ್ಮ ದೇಹದಲ್ಲಿ ಏನಾದ್ರೂ ಗಾಯ ಆಗಿ ನೋವು ಉಂಟಾದಾಗ, ಈ 
ಪ್ರೊಪ್ರಿಯೋಸೆಪ್ಷನ್ ಸಿಸ್ಟಂ ನ ರಿಸಿಪ್ಟರ್ ಗಳು, ಆ ಜಾಗದಲ್ಲಿ ಡೀಪ್ ಆಗಿ ಕೂರುತ್ತದೆ, ನಿರಂತರವಾಗಿ ಅದರ ಬಗ್ಗೆ ಮತ್ತು ದೇಹದ ಪೊಸಿಷನ್ ಬಗ್ಗೆ ಸಂದೇಶ ರವಾನೆ ಮಾಡುತ್ತಿರುತ್ತವೆ, 

ಹೀಗೆ ನಮ್ಮ ಮಿದುಳು, ಈ ಎಲ್ಲಾ ಡಾಟಾ ಕಲೆಕ್ಟ್ ಮಾಡಿ, ಅದಕ್ಕೆ ತಕ್ಕಂತೆ ವರ್ತಿಸಲು, ನಮ್ಮ ದೇಹಕ್ಕೆ ಸಂದೇಶ ರವಾನೆ ಮಾಡುತ್ತವೆ, ಇಷ್ಟೆಲ್ಲ ಕಾರ್ಯಗಳು, ನಮ್ಮ ಜೀವಕೋಶಗಳ ಮೂಲಕ ನಡೆಯುತ್ತವೆ,

ಈ ರೀತಿಯ ಸಿಗ್ನಲ್ ಪಾಸ್ ಆಗುವಿಕೆಯ, ಸ್ಪೀಡ್ ಬಿನ್ನವಾಗಿರುತ್ತದೆ, ಕೆಲವರಲ್ಲಿ, ಈ ಸಿಗ್ನಲ್ ಪಾಸ್ ಅಗುವಿಕೆಯ ನೊಸೆಸೆಪ್ಟರ್‌ಗಳು ದಪ್ಪವಾಗಿದ್ದರೆ, ಹೆಚ್ಚಿನ ನೋವೂ ಉಂಟಾಗುತ್ತದೆ ,

ಅದೇ, ಕಡಿಮೆ ದಪ್ಪ ಹೊಂದಿದ್ದರೆ, ಕಡಿಮೆ ನೋವಿನ ಅನುಭವ ಉಂಟಾಗುತ್ತದೆ, 
ಆದ್ರೆ, ಅಷ್ಟೊಂದು ದೊಡ್ಡ ಮಟ್ಟದ ವ್ಯತ್ಯಾಸ ಏನು ಇರುವುದಿಲ್ಲ, 

ಹೀಗೆ, ಈ ರಿಸಿಪ್ಟರ್ ಗಳು ಇಲ್ಲದೆ ಹೋದರೆ, ನಮ್ಮ ದೇಹದ ಬಗ್ಗೆ, ನಮಗೆ ಅರಿವೇ ಇರುವುದಿಲ್ಲ, ನಮ್ಮ ದೇಹಕ್ಕೆ, ಯಾವ ರೀತಿಯ ಡ್ಯಾಮೇಜ್ ಆದ್ರೂ, ನಮಗೆ ಗೊತ್ತೇ ಆಗುವುದಿಲ್ಲ, 








ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

work from home jobs means ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಹಣ ಗಳಿಸುವ ವಿಧಾನ

ತಲೆಯಲ್ಲಿ ಕೂದಲು ಯಾಕೆ ಉದುರುತ್ತವೆ

ಆತ್ಮ ಇದೀಯ ಅಥವಾ ಇಲ್ವಾ