ನಾವು ಯಾಕೆ ವಯಸ್ಸಗುತ್ತೇವೆ

ಹತ್ತೊಂಬೊತ್ನುರ ತೊಂಬತ್ತೆಳ ರಲ್ಲೀ ಜಿಯಾನ್ನೆ ಕಾಲ್ಮೆಂಟ್ ಎಂಬ ಮಹಿಳೆ ನೂರಾ ಇಪ್ಪತ್ತೆರೇಡು ವರ್ಷ ಬದುಕಿ ಸಾಧನೆ ಮಾಡಿದ್ದಾಳೆ ಇಡೀ ಇತಿಹಾಸದಲ್ಲಿ ಅತಿ ಹೆಚ್ಚು ವರ್ಷ ಬದುಕಿದ ಮಹಿಳೆ ಎಂದು 
ಇವಳ ಬದುಕಿದ ವಯಸ್ಸು ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿತ್ತು 
ಇದಾದ ಮೇಲೆ ಕೋಟ್ಯಾಧಿಪತಿಗಳು ಯಾರು ಈ ರೆಕಾರ್ಡ್ ಅನ್ನು ಯಾರು ಬೇಧಿಸುತ್ತರೋ ಅವರಿಗೆ ಹತ್ತು ಲಕ್ಷ ಡಾಲರ್ ಹಣ ಕೊಡುವುದಾಗಿ ಹೇಳಿದ್ದರು 
ಆದರೆ ರಿಯಾಲಿಟಿ ಆಗಿ ಯೋಚಿಸಿದರೆ ಇದು ಅಸಾಧ್ಯವಾದ ಮಾತು 
ಮಾನವನ ದೇಹ ಅತಿ ಹೆಚ್ಚು ಕಾಲ ಬದುಕುವಂತೆ ರೂಪುಗೊಂಡಿಲ್ಲ ನಮ್ಮ ವಯಸ್ಸು ತೊಂಬತ್ತು ವರ್ಷಕ್ಕೆ ಸೀಮಿತವಾಗಿದೆ 
ಆದ್ರೆ ಈ ವಯಸ್ಸು ಎಂಭುದಕ್ಕೆ ಸರಿಯಾದ ಅರ್ಥ ಯಾವುದು ಎಂಬುದು ವಿಜ್ಞಾನಿಗಳಿಗೂ ತಿಳಿದಿಲ್ಲ ಯಾಕಂದ್ರೆ ಒಂದಿಷ್ಟು ಜನ ವಯಸ್ಸು ಎಂದರೆ ಬೆಳವಣಿಗೆ ಆಗುವುದು ಎನ್ನುವರು ಇನ್ನೂ ಕೆಲವರು ವಯಸ್ಸು ಎಂದರೆ ಇಳಿಮುಖ ಹೊಂದುವುದು ಎನ್ನುತ್ತಾರೆ 
ನಮ್ಮ ದೇಹ ಗಾಳಿ ಬೆಳಕು ಮತ್ತು ಆಹಾರ ತೆಗೆದುಕೊಂಡು ಬದಲಾಗುತ್ತದೆ ದೇಹದ ಎಲ್ಲಾ ಜೀವಕೋಶಗಳ ಆಕಾರ ಬದಲಾಗುತ್ತಾ ಒಂದು ದಿನ ದೇಹದ ಎಲ್ಲಾ ಮೇಕಾನಿಸಾಂ ನಿಂತು ಹೋಗುತ್ತದೆ ವಯಸ್ಸಿನ ನಿಜವಾದ ಪ್ರೋಸೆಸ್ ಸರಿಯಾಗಿ ವಿಜ್ಞಾನಿಗಳಿಗೂ ತಿಳಿಯುತ್ತಿಲ್ಲ ಆದ್ರೆ ರಿಸೆಂಟಾಗಿ ನಡೆಸಿದ ಸಂಶೋಧನೆ ಯಲ್ಲಿ ವಿಜ್ಞಾನಿಗಳು 9 ವಯಸ್ಸಿನ ಪ್ರೋಸೆಸ್ ಗಳನ್ನು ಕಂಡು ಹಿಡಿದಿದ್ದಾರೆ 
ಮೊದಲನೆಯದಾಗಿ ವರ್ಷಗಳು ಸಾಗಿದಂತೆ ನಮ್ಮ ದೇಹವು ಆನುವಂಶಿಕ ಡ್ಯಾಮೇಜ್ ಗಳನ್ನ ಡಿಎನ್ಎ ರೀತಿಯಲ್ಲಿ ಸಂಗ್ರಹಿಸುತ್ತದೆ 
ಇದೇ ರೀತಿ ದೇಹದ ಎಲ್ಲಾ ಜೀವಕೋಶಗಳು ತಮ್ಮ ಶಕ್ತಿ ಅನ್ನು ಕಳೆದುಕೊಳ್ಳುತ್ತದೆ ಯಾಕಂದ್ರೆ ಎಲ್ಲಾ ಜೀವಕೋಶಗಳಿಗೆ ಶಕ್ತಿ ಅನ್ನು ಒದಗಿಸುವ ಮೈಟೊಕಾಂಡ್ರಿಯ ಎಂಬ ಜೀವಕೋಶದ ಒಳಗಿನ ಒಂದು ಅಂಗಾಂಶ ವೀಕ್ ಆಗುತ್ತಾ ಬರುತ್ತದೆ 
ಈ ಮೈಟೊಕಾಂಡ್ರಿಯ ಅಡೆಸೋನಿ ಮತ್ತು ಟ್ರಿಪೋಸ್ಪೆಟ್ ಎಂಬ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ ಹೀಗೆ ಈ ಮೈಟೊಕಾಂಡ್ರಿಯ ಜೀವಕೋಶಗಳ ಚಟುವಟಿಕೆ ಮೇಲೆ ನಿಯಂತ್ರಣ ಸಾಧಿಸುತ್ತದೆ ಮತ್ತು ಜೀವಕೋಶ ಸಾಯುವುದಕ್ಕೆ ಈ ಮೈಟೊಕಾಂಡ್ರಿಯ ಕಾರಣವಾಗುತ್ತೆ ಹೀಗೆ ಮೈಟೊಕಾಂಡ್ರಿಯ ದ ಕಾರ್ಯ ಸ್ಥಗಿತ ಗೊಂಡರೆ ಎಲ್ಲಾ ಜೀವಕೋಶಗಳು ತಮ್ಮ ಶಕ್ತಿ ಅನ್ನು ಕಳೆದುಕೊಳ್ಳುತ್ತವೆ ಹೀಗಾಗಿ ಎಲ್ಲಾ ಜೀವಕೋಶಗಳು ಮತ್ತು ಅಂಗಾಂಶಗಳು ನಾಶವಾಗುತ್ತಾ ಬರುತ್ತವೆ ಇನ್ನೊಂದು ಕಾರಣ ಎಂದರೆ ಜಿನ್ ಗಳು ಹೊಸದಾಗಿ ಹುಟ್ಟಿದ ಮಗುವಿನಲ್ಲಿ ಸೈಲೆಂಟ್ ಆಗಿ ಮತ್ತು ಏನು ಮಾಡದೆ ಇರುತ್ತವೆ ಒಂದಿಷ್ಟು ವಯಸ್ಸೂ ಆಗುತ್ತಾ ಬಂದಾಗ ವಯಸ್ಸು ಜಾಸ್ತಿ ಆದಾಗ ಈ ಜಿನ್ ಗಳು ವಯಸ್ಸು ಕ್ಷಿಣಿಸಲು ಕಾರಣ ಆಗುವ ಅಲ್ಜಿಮೇರ್ಸ್ ಎಂಬ ಕಾಯಿಲೆ ತರುತ್ತವೆ 
ನಾವು ಏನಾದ್ರೂ ಈ ರೀತಿ ಜೆನೆಟಿಕ್ ರೋಗಗಳನ್ನು ಮತ್ತು ಬದಾಲವಣೆಗಳನ್ನು ತಪ್ಪಿಸಿದರು ಕೂಡ ನಮ್ಮದೇ ಆದ ಜೀವಕೋಶಗಳು ನಮ್ಮನ್ನು ಬದುಕಲು ಬಿಡುವುದಿಲ್ಲ ಯಾಕಂದ್ರೆ ನಮ್ಮ ದೇಹದ ಜೀವಕೋಶಗಳ ಮೇಲ್ಪದರದಲ್ಲಿ ಟೆಲೇಮಾರ್ಸ್ ಎಂಬ ರಕ್ಷಣಾ ರಾಸಾಯನಿಕವನ್ನು ಹೊಂದಿರುತ್ತವೆ 
ಆದ್ರೆ ಜೀವಕೋಶಗಳು ಇನ್ನೊಂದು ಜೀವಕೋಶಗಳನ್ನು ಹುಟ್ಟಿಸಿ ಅವು ಸಾಯುತ್ತವೆ ಹೀಗೆ ಪ್ರತಿ ಬಾರಿ ಹೊಸದಾಗಿ ಹುಟ್ಟುವ ಜೀವಕೋಶಗಳಲ್ಲಿ ಈ ರಕ್ಷಣೆ ಮಾಡುವ ರಾಸಾಯನಿಕ ಕಡಿಮೆ ಆಗುತ್ತಾ ಬರುತ್ತದೆ ಹೀಗಾಗಿ ಈ ರಕ್ಷಣಾ ರಾಸಾಯನ ಕಡಿಮೆ ಆದಂತೆ ಜೀವಕೋಶಗಳು ಹೊಸದಾಗಿ ಹುಟ್ಟುವುದು ಸ್ಟಾಪ್ ಆಗಿ ಸತ್ತು ಹೋಗುತ್ತವೆ
ವರ್ಷಗಳು ಕಳೆದಂತೆ ಪ್ರೊಟೀನ್ ನ ಉತ್ಪಾದನೆಯ ಕ್ವಾಲಿಟಿ ಕಡಿಮೆ ಆಗುತ್ತೆ ಹಾಗೂ ಜೀವಕೋಶದ ಎಲ್ಲಾ ಡ್ಯಾಮೇಜ್ ಗಳು ಎದ್ದು ಕಾಣುತ್ತವೆ ಹೀಗಾಗಿ ವಿಷಕಾರಿ ನ್ಯುಟ್ರಿಯನ್ ನ ಅಂಶ ಹೆಚ್ಚುತ್ತದೆ ಹೀಗಾಗಿ ದೇಹದಲ್ಲಿ ಹೆಚ್ಚಾದ ಚಯಾಪಚಯ ಕ್ರಿಯೆ ನಡೆಯುತ್ತದೆ ಇದು ದೇಹ ಮರಣ ಹೊಂದುವಂತೆ ಮಾಡುತ್ತದೆ ಮತ್ತು ಜೀವಕೋಶಗಳ ಕಮ್ಯುನಿಕೇಶನ್ ಕೂಡ ನಿಧಾನ ಆಗುತ್ತದೆ ಕೊನೆಗೆ ದೇಹದ ಎಲ್ಲಾ ಕಾರ್ಯ ಕೂಡ ದುರ್ಬಲವಾಗುತ್ತದೆ 
ಮುಂದೆ ಒಂದು ದಿನಾ ನಮ್ಮ ಜೀವಕೋಶಗಳನ್ನು ಸರಿಮಾಡುವ ಸಣ್ಣ ರೋಬೋಟ್ ಗಳು ಮತ್ತು ಜಿನ್ ತೆರಪಿ ಟೆಕ್ನಾಲಜಿ ಬಂದ್ರೆ ನಾವು ಸಾಯದೆ ಬದುಕಬಹುದು 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!