ಕೊರಿಯರ್ ಮಾಡುವುದು ಹೇಗೆ
ಕೊರಿಯರ್ ಮಾಡಲು ಹಲವಾರು ಕಂಪನಿಗಳು ಇವೆ ಅವುಗಳಲ್ಲಿ ಪ್ರಮುಖ ವಾದವೂ ಎಂದರೆ ಪೋಸ್ಟ್ ಆಫೀಸ್, ಎಕ್ಸ್ಪ್ರೆಸ್ ಬೀಸ್ , ಡಿಟಿಟಿಸಿ, shiprocket etc..
ಪೋಸ್ಟ್ ಆಫೀಸ್ ನಲ್ಲಿ ಸ್ವಲ್ಪ ಕಡಿಮೆ ಚಾರ್ಜ್ ಇರುತ್ತೆ ಆದ್ರೆ ಡೆಲಿವರಿ ಸಲ್ಪ ಲೇಟ್ ಆಗ್ಬೋದು ಆದ್ರೆ ಇತರೆ ಕೊರಿಯರ್ ನಲ್ಲಿ ಚಾರ್ಜ್ ಸ್ವಲ್ಪ ಜಾಸ್ತಿ ಇರುತ್ತೆ ಆದ್ರೆ ಸ್ಪೀಡ್ ಆಗಿ ಇನ್ ಟೈಮ್ ಡೆಲಿವರಿ ಮಾಡ್ತಾರೆ
2. ಚಾರ್ಜರ್ಸ್ ಎಷ್ಟಿರುತ್ತದೆ
• Expressbees = 500 ಗ್ರಾಂ ಗೆ 23 ರು
ಅದೇ 500 ಗ್ರಾಂ ಮೇಲೆ ಆದ್ರೆ 1 ಕೆಜಿ ಗೆ 10 ರು ಜಾಸ್ತಿ ಆಗುತ್ತೆ
• DTTC = 100 ರಿಂದ 200 ಪರ್ ಕೆಜಿ
• ಪೋಸ್ಟ್ ಆಫೀಸ್ = 500 ಗ್ರಾಂ ಗೆ 36 ರು
ಸೇಮ್ Xpress bees ಹಾಗೆ
3. ಕೊರಿಯರ್ ಪ್ರೋಸೆಸ್ ಏನು
ನಿಮ್ಮ ಪ್ರೊಡಕ್ಟ್ ನ ಪ್ಯಾಕ್ ಮಾಡಿಕೊಂಡು ಮೇಲೆ ಒಂದು ವೈಟ್ ಶೀಟ್ ಆಲ್ಲಿ ಫ್ರಮ್ ಅಡ್ರೆಸ್ ಮತ್ತು to ಅಡ್ರೆಸ್ ಬರೆದು ಅಂಟಿಸಿ ಕೊರಿಯರ್ ಸೆಂಟ್ರ ಅತ್ರ ಪಾರ್ಸಲ್ ಮಾಡ್ಬೇಕು ಅಂತ ಹೇಳಿ ಕೊಟ್ರೆ ಆಯ್ತು ಮಿಕ್ಕಿದ್ದನ್ನು ಅವ್ರೆ ಮಾಡಿಸ್ತಾರೆ
ಆದ್ರೆ ನೀವು ಬ್ಯುಸಿನೆಸ್ ಮಾಡ್ತಾ ಇದ್ರೆ ಆರ್ಡರ್ ಜಾಸ್ತಿ ಬರ್ತವೆ ಆಗ ಅವರ ವೆಬ್ಸೈಟ್ ಅಲ್ಲಿ ಹೋಗಿ ರೀಚಾರ್ಜ್ ಮಾಡಿ ಇಕೊಂಡ್ರೆ ಪದೇ ಪದೆ ದುಡ್ಡು ಕಟ್ಟುವ ಆಗಿರಲ್ಲ ಮತ್ತೆ ಅವ್ರೆ ನಿಮ್ಮ ಮನೆ ಹತ್ರ ಬಂದು ಪಾರ್ಸಲ್ ತಗೊಂಡು ಕಸ್ಟಮರ್ ಗೆ ತಲುಪಿಸುತ್ತಾರೆ
ಅವ್ರ ವೆಬ್ಸೈಟ್ ಅನ್ನು ಹೇಗೆ ಬಳಸಬೇಕು ಅಂತ ಅವ್ರೆ ಟ್ರೈನಿಂಗ್ ಕೊಡ್ತಾರೆ ಶಿಪ್ ರಾಕೆಟ್ ಅಂತ ವೆಬ್ ಸೈಟ್ ಅಲ್ಲಿ ಹೋಗಿ ಸೈನ್ ಅಪ್ ಆಗಿ ಆಗ ಆಲ್ಲಿ ಡೇಟ್ ಫಾರ್ ಟ್ರೈನಿಂಗ್ ಅಂತ ಇರುತ್ತೆ ಆಲ್ಲಿ ನೀವು ಸೆಲೆಕ್ಟ್ ಮಾಡಿದ ಡೇಟ್ ಗೆ ಆನ್ಲೈನ್ ಅಲ್ಲೇ ಟ್ರೈನಿಂಗ್ ಕೊಡ್ತಾರೆ