ಯಾಕೆ ಕಣ್ಣಿನ ಮೂಲೆಯಲಿ ಈ ರೀತಿ ಇದೆ
ಹಾಯ್ ಮೈ ಡಿಯರ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ಕಣ್ಣಿನ ಮೂಲೆಯಲ್ಲಿ ಈ ರೀತಿಯ ಗುಲಾಬಿ ಬಣ್ಣದ ಮೃದು ಅಂಗಾಂಶ ಯಾಕೆ ಇದೆ ಎಂದು ಹೇಳುತ್ತೇವೆ
ಇದು ಕಣ್ಣನ್ನು ದೂಳು ಮತ್ತು ಡಸ್ಟ್ ನಿಂದಾ ಕಣ್ಣನ್ನು ರಕ್ಷಣೆ ಮಾಡುವ ಒಂದು ತೆಳುವಾದ ಪದರದ ರೀತಿ ಕೆಲಸ ಮಾಡುತ್ತದೆ ಇದು ಹೆಚ್ಚಾಗಿ ಪಕ್ಷಿಗಳಲ್ಲಿ ಮತ್ತು ಪ್ರಾಣಿಗಳಲ್ಲಿ ಕಂಡು ಬರುತ್ತದೆ ಆದ್ರೆ ಇದು ಮನುಷ್ಯರಲ್ಲಿ ಸರಿಯಾಗಿ ವರ್ಕ್ ಮಾಡುವುದಿಲ್ಲ ಇದು ನಮ್ಮ ಪ್ರಾಚೀನ ಕಾಲದ ಪೂರ್ವಜರಿಗೆ ಹೆಚ್ಚಿಗೆ ಇತ್ತು ಆದ್ರೆ ಇಂದು ದಶಕಗಳ ಕಾಲ ಕಳೆದಂತೆ ಇದು ಕಡಿಮೆ ಆಗಿದೆ ಆದ್ರೆ ಇದು ಯಾಕೆ ಅಲ್ಲಿಗೆ ಸ್ಟಾಪ್ ಆಗಿ ನಿಂತಿದೆ ಪೂರ್ತಿ ಯಾಕೆ ಹೋಗಿಲ್ಲ ?
ಇದಕ್ಕೆ ಸಿಂಪಲ್ ಆದ ಉತ್ತರ ಅಂದ್ರೆ ಸೃಷ್ಟಿಯ ಗುಣಲಕ್ಷಣ ಹೇಗೆಂದರೆ ಜೀವಿಗಳಲ್ಲಿ ಏನಾದ್ರೂ ದಿನನಿತ್ಯದ ಜೀವನಕ್ಕೆ ತೊಂದರೆ ಕೊಡುವ ಅಂಗಗಳು ಇದ್ದರೆ ಅವು ಅವರ ಜೀವನ ಶೈಲಿಗೆ ತಕ್ಕಂತೆ ಜೀವಿಗಳಿಗೆ ಅನುಕೂಲ ಆಗುವಂತೆ ಕಾಲದಿಂದ ಕಾಲಕ್ಕೆ ಪರಿವರ್ತನೆ ಹೊಂದುತ್ತವೆ ಅಕಸ್ಮಾತ್ ಏನಾದ್ರೂ ಆ ರಚನೆಗಳಿಂದ ದೇಹಕ್ಕೆ ಮತ್ತು ಜೀವನ ಶೈಲಿಗೆ ಅಷ್ಟೊಂದು ಹಾನಿಕಾರಕ ಆಗಲ್ಲ ಅಂದ್ರೆ ಅವು ವರ್ಕ್ ಮಾಡುವುದನ್ನು ನಿಲ್ಲಿಸಿ ಅಲ್ಲಿಗೆ ಸ್ಟಾಪ್ ಆಗುತ್ತವೆ ಉದಾರಣೆಗೆ ಹಿಂದಿನ ಮಾನವನ ಹಿಂದೆ ಇದ್ದ ಬಾಲ ಇಂದು ಇಲ್ಲ ಅದಕ್ಕೆ ಕಾರಣ ಹಿಂದೆ ಬದುಕುತ್ತಿದ್ದ ಮಾನವ ಮರದ ಮೇಲೆ ವಾಸಿಸುತ್ತಿದ್ದ ಇದರಿಂದ ಮರದ ಮೇಲೆ ವಾಸಿಸಲು ಸಹಾಯ ಆಗುವಂತೆ ಅವನಿಗೆ ಹಿಂದೆ ಬಾಲ ಬೆಳೆದಿತ್ತು ಆದ್ರೆ ಕಾಲ ಕಳೆದಂತೆ ಅವನು ನೆಲದ ಮೇಲೆ ವಾಸಿಸಲು ಮುಂದಾದನು ಆಗ ಅವನು ನಡೆಯುವಾಗ ಆ ಬಾಲ ತೊಂದರೆ ಕೊಡುತ್ತಿದ್ದ ಕಾರಣ ಅಂದಿನಿಂದ ಸ್ವಲ್ಪ ಸ್ವಲ್ಪ ಕಡಿಮೆ ಆಗುತ್ತಾ ಅದು ಇಂದು ಇಲ್ಲವಾಗಿದೆ ಇಂದು ಮಗು ಗರ್ಭದಲ್ಲಿ ಬೆಳೆಯುವ ಆರಂಭದಲ್ಲಿ ಬಾಲ ಇರುತ್ತೆ ಆದ್ರೆ ಸ್ವಲ್ಪ ಫೈವ್ ಅಥವ ಸಿಕ್ಸ್ ಮಂತ್ ಆದಮೇಲೆ ಆ ಬಾಲ ಇಲ್ಲವಾಗುತ್ತದೆ
ಹೀಗೆ ಬೇಡವಾದ ರಚನೆಗಳು ಕಾಲದಿಂದ ಕಾಲಕ್ಕೆ ಅಳಿದು ಹೋಗುತ್ತವೆ ಇನ್ನೊಂದು ಉದಾರಣೆ ಎಂದರೆ ನೀವು ನಿಮ್ಮ ಕೈಯಲ್ಲಿನ ಕಿರು ಬೆರಳು ಮತ್ತು ಹೆಬ್ಬೆಟ್ಟನ್ನು ಹೊಂದುಗುಡಿಸಿದಾಗ ನಿಮ್ಮ ಮಣಿಕಟ್ಟಿನ ಜಾಗದಲ್ಲಿ ಸ್ವಲ್ಪ ಸ್ನಾಯು ಎದ್ದ ರೀತಿ ಕಾಣುತ್ತದೆ ಆದ್ರೆ ಅದು ಕೆಲವರಿಗೆ ಇರುವುದಿಲ್ಲ ಇನ್ನೂ ಕೆಲವರಿಗೆ ಹಾಗೆ ಇದೆ ಇದು ಯಾಕೆ ಇತ್ತು ಅಂದ್ರೆ ಹಿಂದೆ ಮಾನವ ಮರದ ಮೇಲೆ ವಾಸಿಸುತಿದ್ದರಿಂದ ಮರದ ಕೊಂಬೆಗಳನ್ನು ಹಿಡಿದು ಮುಂದೆ ಸಾಗುತ್ತಿದ್ದ ಸೋ ಹಾಗಾಗಿ ಗಟ್ಟಿಯಾಗಿ ಹಿಡಿಯಲು ಸಹಾಯ ಆಗುವಂತೆ ಆಲ್ಲಿ ಸ್ನಾಯುಗಳು ರಚನೆ ಆಗಿದ್ದವು ಆದ್ರೆ ಇಂದು ಅದರ ಉಪಯೋಗ ಇಲ್ಲದ ಕಾರಣ ಅಳಿಸಿ ಹೋಗಿದೆ ಇವಾಗ ಅದು ಕೆಲವರಲ್ಲಿ ಕಂಡು ಬರುತ್ತದೆ ಆದ್ರೆ ಅದು ಸ್ನಾಯು ಆಗಿರುವುದಿಲ್ಲ ನಿಷ್ಕ್ರಿಯ ಗೊಂಡ ಸ್ನಾಯುವಿಗೆ ಅಂಟಿಕೊಳ್ಳುವ ಸ್ನಾಯು ವಿನ ರಜ್ಜು ಆಗಿರುತ್ತದೆ ಆದ್ರೆ ಮರದ ಮೇಲೆ ಮತ್ತು ನೆಲದ ಮೇಲೆ ಕೂಡ ವಾಸಿಸುವ ಮಾನವನನ್ನು ಹೋಲುವ ಚಿಂಪಾಂಜಿ ಗೊರಿಲ್ಲಾ ಇತರೆ ಪ್ರಾಣಿಗಳಲ್ಲಿ ಅವುಗಳಿಗೆ ಅನುಕೂಲ ಆಗುವಂತೆ ಇದು ಹೆಚ್ಚಾಗಿ ಬೆಳೆದಿರುತ್ತದೆ
ಇನ್ನೊಂದು ಅಪೆಂಡಿಕ್ಸ್
ಹಿಂದಿನ ಮಾನವರು ಹಸಿ ಹುಲ್ಲು ಮತ್ತು ಹಸಿ ಮಾಂಸ ತಿನ್ನುತ್ತಿದ್ದರು ಹೀಗಾಗಿ ಈ ರೀತಿಯ ಆಹಾರವನ್ನು ಸ್ಟೋರ್ ಮಾಡಿಕೊಂಡು ಫಿಲ್ಟರ್ ಮಾಡಲು ಕರುಳಿನ ಭಾಗ ದೊಡ್ಡದಾಗಿತ್ತು ಆದ್ರೆ ಕಾಲ ಕಳೆದಂತೆ ಮಾನವ ಹಸಿ ಪದಾರ್ಥ ಬಿಟ್ಟು ಬೇಯಿಸಿ ಸಂಸ್ಕರಿಸಿ ತಯಾರಿಸಿದ ಆಹಾರ ಸೇವಿಸಲು ಪ್ರಾರಂಭಿಸಿದ ಹೀಗಾಗಿ ಕರುಳಿನ ಕೆಲಸ ಕಡಿಮೆ ಆಗಿ ಅದು ಸಲ್ಪ ಸಣ್ಣದಾಗುತ್ತದೆ ಆದ್ರೆ ಕಳುಳಿಗೆ ಅಂಟಿಕೊಂಡಿರುವ ಅಪೆಂಡಿಕ್ಸ್ ಇನ್ನೂ ಹಾಗೇ ಇದೆ ಅಕಸ್ಮಾತ್ ಇದು ಸಲ್ಪ ದೊಡ್ಡದಾದರೆ
ಜೀವಿಗೆ ಹಾನಿಯಾಗಿ ಮರಣ ಹೊಂದುವ ಸಾಧ್ಯತೆ ಇರುತ್ತದೆ ಇದು ಅಪಾಯಕಾರಿ ಆಗಿದ್ದರು ಇನ್ನೂ ಯಾಕೆ ಇದು ಹೋಗಿಲ್ಲ
ಅಥವಾ ಸಣ್ಣದಾಗಿಲ್ಲ ಇದಕ್ಕೆ ಉತ್ತರ ಇನ್ನೂ ಸರಿಯಾಗಿ ತಿಳಿದು ಬಂದಿಲ್ಲ ಕೆಲವು ವಿಜ್ಞಾನಿಗಳು ಹೇಳುವ ಪ್ರಕಾರ ಇದ್ರಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಇರಬಹುದು ಅವು ಕರುಳಿಗೆ ಸಹಾಯ ಆಗುವಂತೆ ಆಹಾರವನ್ನು ತಿಂದು ತೀಕ್ಷ್ಣವಾಗಿ ಸಣ್ಣದಾಗಿಸುವ ಮೂಲಕ ಕೆಲಸ ನಿರ್ವಹಿಸಬಹುದು ಎಂದು ಹೇಳುತ್ತಾರೆ
ಆದ್ರೆ ಸರಿಯಾದ ಕಾರಣ ಗೊತ್ತಿಲ್ಲ ಯಾಕಂದ್ರೆ ಇದು ಮುಂದೆ ಎವಲ್ಯೂಷನ್ ಆಗುತ್ತಾ ಇಲ್ಲದೆ ಹೋಗಬಹುದು ಎವೆಲ್ಯೂಷನ್ ಅನ್ನುವುದು ಒಂದು ಇಂಪರ್ಫೆಕ್ಟ್ ಪ್ರೋಸೆಸ್ ಇದು ಯಾವುದೇ ಬದಲಾವಣೆ ಆಗಲು ಸಾವಿರಾರು ವರ್ಷಗಳನ್ನು ತೆಗೆದುಕೊಳ್ಳುತ್ತದೆ