ಹುಟ್ಟಿದ ಮೇಲಿನ ಎರೆಡು ವರ್ಷದ ನೆನಪು ಯಾಕೆ ಮರೆಯುತ್ತೇವೆ
ಇದಕ್ಕೆ ನಾಲ್ಕು ಕಾರಣ ಇವೆ
1.ನೆನಪುಗಳನ್ನು ಇಟ್ಟುಕೊಳ್ಳುವ ಹಿಪ್ಪೊಕ್ಯಾಂಪಸ್ ಬೆಳೆದಿರುವುದಿಲ್ಲ
2.ಸೆನ್ಸ್;- ಅಂದ್ರೆ ತನಗೆ ತಾನು ಯಾರು ಎಂಬ ಅರಿವು ಇರುವುದಿಲ್ಲ ಇದಕ್ಕೆ ಒಂದು ಸಂಶೋಧನೆ ಕೂಡ ಮಾಡಿದ್ದಾರೆ ಒಂದು ಎರಡು ವರ್ಷದ ಕೆಳಗಿನ ಮಗುವಿನ ಮುಖದ ಮೇಲೆ ಒಂದು ಚಿತ್ರ ಬಿಡಿಸಿ ಕನ್ನಡಿ ಮುಂದೆ ನಿಲ್ಲಿಸಿದಾಗ
ಮುಟ್ಟಿ ಕೊಳ್ಳದೆ, ಸುಮ್ಮನೆ ಇರುತ್ತದೆ, ಆದ್ರೆ, ಎರೆಡು ವರ್ಷ ಮೇಲ್ಪಟ್ಟ ಮಗು, ತನ್ನ ಮುಖದ ಮೇಲಿನ ಚಿತ್ರ ನೋಡಿ, ತನ್ನ ಮುಖವನ್ನು ಮುಟ್ಟಿಕೊಳ್ಳುತ್ತದೆ, ಹೀಗೆ, ತನ್ನನ್ನು ಗುರುತಿಸುವ ಮೂಲಕ, ಸುತ್ತಮುತ್ತಿಲನ ಪರಿಸರವನ್ನು, ಮತ್ತು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ,
ಮೂರನೆಯದಾಗಿ, ಭಾಷೆ, ಸಾಮಾನ್ಯವಾಗಿ, ಭಾಷೆ ಗೊತ್ತಿರದ ಕಾರಣ, ಹಲವಾರು ವಿಷಯಗಳ ಬಗ್ಗೆ ಅದಕ್ಕೆ, ಅದ್ರಾ ಮಿದುಳಿಗೆ ಅರ್ಥ ಆಗುವುದಿಲ್ಲ, ಸೋ ಹೀಗಾಗಿ ಅರ್ಥ ಆಗದೆ ಇರುವುದರಿಂದ, ಅದ್ರ ಮಿದುಳು ಅದರ ಕಡೆ ಹೆಚ್ಚು ಗಮನ ಕೂಡ ಕೊಡಲಾಗುವುದಿಲ್ಲ,
ಕೊನೆಯದಾಗಿ, ಸಾಮಾನ್ಯ ಮರೆಯುವಿಕೆ, ಅಂದ್ರೆ ಸಾಮಾನ್ಯವಾಗಿ ವ್ಯಕ್ತಿಯು ಬೆಳೆದಂತೆ, ಹಲವು ವರ್ಷಗಳ ಹಿಂದಿನ ನೆನಪುಗಳನ್ನು ಮರೆಯುತ್ತಾ ಬರುತ್ತಾನೆ, ಪ್ರಮುಖ ವಿಷಯಗಳು ಮಾತ್ರ ನೆನಪಿನಲ್ಲಿ ಇರುತ್ತವೆ, ಹಾಗೆಯೇ, ವರ್ಷಗಳು ಕಳೆದಂತೆ, ನೆನಪುಗಳು ಮರೆ ಆಗುವ ಸಾದ್ಯತೆ ಇರುತ್ತದೆ, ಹೊಸ ನೆನಪುಗಳ ಅಗಮದಿಂದ