ನಮ್ಮ ಮೈಂಡ್ ಅನ್ನು 100% ಉಪಯೋಗಿಸುವುದು ಹೇಗೆ
ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ನಿಮ್ಮ ಬ್ರೈನ್ ಅನ್ನು 100% ಉಪಯೋಗಿಸುವುದು ಹೇಗೆ ಎಂದು ವಿವರಿಸಲಾಗಿದೆ
ನೀವು ನಿಮ್ಮ ಮೈಂಡ್ ಅನ್ನು 100% ಪರ್ಸೆಂಟ್ ಬಳಸಿಕೊಳ್ಳಬೇಕೆಂದು ಅಂದುಕೊಂಡಿದ್ದರೆ ಈ 5 ನಿಯಮಗಳನ್ನು ಪಾಲಿಸಬೇಕು
1) ನೀವು ಟೈಂ ಮ್ಯಾನೇಜ್ ಮಾಡುವ ಬದಲು ಎನರ್ಜಿ ಮ್ಯಾನೇಜ್ ಮಾಡಿ
ಎಲ್ರೂ ಹೇಳ್ತಾರೆ ಟೈಂ ಅನ್ನ ಯಾರು ಸರಿಯಾಗಿ ಮ್ಯಾನೇಜ್ ಮಾಡ್ತಾರೆ ಅವ್ರು ಮಾತ್ರ ಆಚಿವ್ ಮಾಡ್ತಾರೆ ಅಂತ ಆದ್ರೆ ರಿಯಾಲಿಟಿ ಏನಂದ್ರೆ ಟೈಂ ಅನ್ನೋದು ಒಂದೇ ರೀತಿಯಾಗಿ ಹೋಗ್ತಾ ಇರುತ್ತದೆ ಆದ್ರೆ ನಿಮ್ಮ ಮೈಂಡ್ ಎನರ್ಜಿ ಹೆಚ್ಚು ಕಮ್ಮಿ ಆಗ್ತಾ ಇರುತ್ತೆ ಸೋ ನೀವು ಯಾವಾಗ ನಿಮ್ಮ ಎನರ್ಜಿ ಜಾಸ್ತಿ ಇರುತ್ತೆ ಆಗ ಮುಕ್ಯವಾದ ಕೆಲಸಗಳನ್ನು ಮಾಡಿ ಎನರ್ಜಿ ಕಡಿಮೆ ಇರುವಾಗ ಸಾಮಾನ್ಯ ಕೆಲಸ ಮಾಡಿ
2. ಒಳ್ಳೆಯ ಆಹಾರ ಸೇವಿಸುವುದು
ಒಳ್ಳೆಯ ಪೋಷ್ಟಿಕ ಆಹಾರ ಸೇವಿಸುವುದರಿಂದ ಮಿದುಳಿನ ನ್ಯೂರಾನ್ ಗಳ ಕಾರ್ಯ ಕ್ಷಮತೆ ಹೆಚ್ಚುತ್ತದೆ ಮೈಂಡ್ ಅಲ್ಲಿ ಗ್ರೆ ಮ್ಯಾಟರ್ ಅಂತ ಇರುತ್ತೆ ಇದು ಒಳ್ಳೆಯ ಆಹಾರದಿಂದ ಹೆಚ್ಚುತ್ತದೆ ಇದು ಜಾಸ್ತಿ ಇದ್ದರೆ ಹೆಚ್ಚಿನ ನ್ಯುರಾನ್ ಕನೆಕ್ಟಿವಿಟಿ ಆಗುತ್ತದೆ
ಒಳ್ಳೆಯ ಆಹಾರ ಅಂದ್ರೆ ಕಾಳುಗಳು ಮಿಲ್ಕ್ ಹಣ್ಣು ಗೋಡಂಬಿ ಒಣ ದ್ರಾಕ್ಷಿ ಬಾದಾಮಿ ಇವುಗಳಲ್ಲಿ ಹೆಚ್ಚಿನ ಪ್ರೊಟೀನ್ ಇರುತ್ತದೆ
3.ನೀವು ಕೆಲಸ ಮಾಡುವ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳುವುದು
ನೀವು ಕೆಲಸ ಮಾಡುವ ಸ್ಥಳ ಅಥವಾ ಕೋಣೆ ಶುಚಿತ್ವದಿಂದ ಕೂಡಿರಬೇಕು ಯಾಕಂದ್ರೆ ನಿಮ್ಮ ಕೆಲಸದ ಮೇಲೆ ನಿಮಗೆ ಫೋಕಸ್ ಬರುತ್ತದೆ ಅಂದ್ರೆ ಬರಿ ಕ್ಲೀನ್ ಮಾಡೋದೇ ಆಗ್ಬಾರ್ದು
ನಿಮ್ಮ ವರ್ಕ್ ನ ಮೇಲಿನ ಫೋಕಸ್ಸೆ ಇಂಪಾರ್ಟೆಂಟ್ ಆಗಿರಬೇಕು
4. ಒತ್ತಡದ ನಿವಾರಣೆ
ನೀವು ಯಾವುದಾದರೂ ಸ್ಟ್ರೆಸ್ ಅಲ್ಲಿ ಇದ್ದರೆ ಅಥವಾ ಒತ್ತಡದಲ್ಲಿ ಇದ್ದರೆ ಮೊದಲು ನಿಮ್ಮ ಮನಸ್ಸನ್ನು ಸರಿ ಪಡಿಸಿಕೊಳ್ಳಿ ಯಾಕಂದ್ರೆ ಎಲ್ಲಾ ಕೆಲಸಕ್ಕೂ ಎಲ್ಲಾ ಐಡಿಯಾಗಳಿಗು ಮನಸೇ ಇಂಪಾರ್ಟೆಂಟ್ ಸೋ ದಿನಾಲೂ ವ್ಯಾಯಾಮ ಮತ್ತು ದ್ಯಾನದ ಕಡೆ ಗೆ ನಿಮ್ಮನ್ನು ಸ್ವಲ್ಪ ಸಮಯ ತೊಡಗಿಸಿಕೊಳ್ಳಿ
5. ಪವರ್ ಅನ್ನು ಸರಿಯಾಗಿ ಬಳಸಿ
ನಿಮ್ಮ ಮೈಂಡ್ ಪವರ್ ಯಾವಾಗ ಹೆಚ್ಚಿರುತ್ತದೆ ಎಂದರೆ ಬೆಳಿಗ್ಗೆ ಎದ್ದಾಗ ಹೆಚ್ಚಿರುತ್ತದೆ ಹೀಗಾಗಿ ನೀವು ಮುಕ್ಯವಾದ ಕೆಲಸಗಳನ್ನು ಮೊದಲು ಮಾಡುವುದು ಒಳ್ಳೆಯದು ಅದು ಬಿಟ್ಟು ನೀವು ಬೆಳಿಗ್ಗೆ ಎದ್ದ ಕೂಡಲೇ ಒಂದು ತಾಸು ಮೊಬೈಲ್ ಉಪಯೋಗಿಸುತ್ತೇನೆ ಆಮೇಲೆ ಟಿವಿ ನೋಡ್ತೇನೆ ಆಮೇಲೆ ವರ್ಕ್ ಗೆ ಮುಂದಾಗುತ್ತೇನೆ ಅಂದ್ರೆ ನಿಮ್ಮ ಎನರ್ಜಿ ಲೆವೆಲ್ ಕಡಿಮೆ ಆಗಿರುತ್ತೆ ಸೋ ಹೀಗಾಗಿ ನಿಮ್ಮ ವರ್ಕ್ ಲೆವೆಲ್ ಕೆಪ್ಯಾಸಿಟಿ ಕೂಡ ಕಡಿಮೆ ಆಗುತ್ತೆ