how memory work in kannada

ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ಕೆಲವು ನೆನಪುಗಳು ಎಷ್ಟು ವರ್ಷ ಆದ್ರೂ ಹಾಗೆ ಇರುತ್ತವೆ ಆದ್ರೆ ಕೆಲವೊಂದು ನೆನಪುಗಳು ಯಾಕೆ ಮರೆತು ಹೋಗುತ್ತವೆ ಎಂಬುದಾಗಿದೆ..
ನಾವು ಯಾವುದಾದ್ರೂ ಹೊಸ ಕೆಲಸ ಮಾಡುವಾಗ ಉದಾರಣೆಗೇ ಹೊಸ ನಂಬರ್ ಡೈಯಲ್ ಮಾಡಿದಾಗ ಅದು ಶಾರ್ಟ್ ಟರ್ಮ್ ಮೆಮೊರಿ ಅಲ್ಲಿ ಕೂರುತ್ತದೆ ಅದು ಕೆಲವು ನಿಮಿಷಗಳ ವರೆಗೆ ಇರುತ್ತದೆ ಹೀಗೆ ಒಂದೇ ರೀತಿಯ ಕೆಲಸ ಅಥವಾ ಅಭ್ಯಾಸ ಪದೆ ಪದೆ ಮಾಡ್ತಾ ಇದ್ರೆ ಅದು ಲಾಂಗ್ ಟರ್ಮ್ ಮೆಮೋರಿಯಲ್ಲಿ ಕೂರುತ್ತದೆ ಯಾಕಂದ್ರೆ ಆ ವಿಷಯ ನ್ಯೂರಾನ್ಗಳ ಸಿನಾಪ್ಸಿಸ್ ಗಳ ನಡುವೆ ಪದೆ ಪದೆ ಸಂವಹನ ನಡೆಯುವುದರಿಂದ ಅದು ಹಿಪ್ಪೋಕ್ಯಾಂಪಸ್ ಗೆ ಹೋಗುತ್ತದೆ ಅಲ್ಲಿ ಮತ್ತೆ ಪ್ರೋಸೆಸ್ ಆಗಿ ಲಾಂಗ್ ಟರ್ಮ್ ಮೆಮೊರಿ ಆಗಿ ಕನ್ವರ್ಟ್ ಆಗುತ್ತವೆ 
ಆದ್ರೆ ಕೆಲವೊಂದು ವಿಷಯಗಳು ಯಾಕೆ  ಮರೆತು ಹೋಗುತ್ತವೆ ಸಂಶೋಧಕರು
ಇದಕ್ಕೆ ವಯಸ್ಸು ಒಂದು ಕಾರಣ ಎಂದು ಹೇಳುತ್ತಾರೆ ಯಾಕಂದ್ರೆ ನಾವು ವಯಸ್ಸಾದಂತೆ ನಮ್ಮ ಹಿಪ್ಪೊಕ್ಯಾಂಪಸ್ ವೀಕ್ ಆಗ್ತಾ ಬರುತ್ತದೆ ಈ ಹಿಪ್ಪೋಕ್ಯಾಂಪಸ್ ಪ್ರತಿ ಹತ್ತು ವರ್ಷಕ್ಕೊಮ್ಮೆ ತನ್ನ 5% ನಶ್ಟು ನ್ಯುರಾನ್ ಗಳನ್ನು ಕಳೆದುಕೊಳ್ಳುತ್ತದೆ ಇದರಲ್ಲಿ ಕಲಿಕೆಗೆ ಮತ್ತು ನೆನೆಪಿಗೆ ಸಹಾಯ ಮಾಡುವ acetylcholine ಎಂಬ ನ್ಯುರೋಟ್ರಾನ್ಸ್ಮಿಟರ್ ಗಳು ಕುಂದುತ್ತದೆ 
ನಾವು ಏಕಾಗ್ರತೆ ಇಂದ ಯಾವುದಾದರೂ ವಿಷಯ ಆಲಿಸಿದರೆ ಮತ್ತು ಆ ವಿಷಯ ಅರ್ಥಪೂರ್ಣವಾಗಿ ಇದ್ದರೆ ಅಂಥ ವಿಷಯಗಳು ಲಾಂಗ್ ಟರ್ಮ್ ಮೆಮರಿಗೆ ಹೋಗುವ ಸಾಧ್ಯತೆ ಇರುತ್ತದೆ 
ಆದ್ರೆ ನಮ್ಮ ಮೆಂಟಲ್ ಹಾಗೂ ದೇಹದ ಪ್ರಾಬ್ಲಂ ಗಳು ನಾವು atention ಕೊಡಲು ಬಿಡುವುದಿಲ್ಲ ಹೀಗಾಗಿ ನಾವು ಏನನ್ನಾದರೂ ನೆನಪಿಸಿಕೊಂಡಾಗ ಆ ಪ್ರಾಬ್ಲಂ ಗಳು ನೆನಪಿನ ಶಕ್ತಿಗೆ ತಡೆ ಆಗುತ್ತವೆ 
ಹಾಗೇ ಇನ್ನೊಂದು ತಡೆ ಗೋಡೆ ಎಂದರೆ ದೀರ್ಘಕಾಲದ ಸ್ಟ್ರೆಸ್ ಅಥವಾ ಒತ್ತಡ 
ಇದು ಜಾಸ್ತಿ ಇದ್ದರೆ  ನಮ್ಮ ದೇಹವನ್ನು ಹೈಪರ್ ಅಲರ್ಟ್ ಆಗುವಂತೆ ಮಾಡುತ್ತದೆ ಆದ್ರೆ ಇದು ಒಳ್ಳೆದಕ್ಕೆ ಆಗುತ್ತದೆ ತಾತ್ಕಾಲಿಕವಾಗಿ ನಮ್ಮನ್ನು ನಾವು ಕಾಪಾಡಿಕೊಳ್ಳಲು ಈ ರೀತಿ ಬ್ಲಡ್ ಪ್ರೆಶರ್ ಹೆಚ್ಚಾಗಿ ಜಾಸ್ತಿ ಹೋರಾಡುವ ರೀತಿ ಆಗಿರುತ್ತದೆ ಆದ್ರೆ ಇದು ದೀರ್ಘಕಾಲದ ವರೆಗೆ ಹೀಗೆ ಇದ್ದರೆ ತೊಂದರೆ ಆಗುತ್ತದೆ ಹೀಗೆ ಸ್ಟ್ರೆಸ್ ಅಲ್ಲಿ ಬಿಡುಗಡೆ ಆಗುವ ಕೆಮಿಕಲ್ಸ್ ನಮ್ಮ ಮಿದುಳಿನ ತುಂಬಾ ಇದ್ದಾಗ ಹೊಸ ನೆನಪುಗಳಿಗೆ ಅಥವಾ ಕಲಿಕೆಗೆ ಜಾಗ ಇರುವುದಿಲ್ಲ ಮತ್ತು ಏಕಾಗ್ರತೆಗೆ ಕೂಡ ತೊಂದರೆ ಮಾಡುತ್ತದೆ ಯಾಕಂದ್ರೆ ಒತ್ತಡ ಇದ್ದಾಗ ಅದು ಮಾನಸಿಕ ಚಟುವಟಿಕೆಗಿಂತ ದೇಹದ ಚಟುವಟಿಕೆ ಹೆಚ್ಚಾಗುವಂತೆ ಮಾಡುತ್ತದೆ 
ಸೋ ಹೀಗಾಗಿ ಒತ್ತಡ ದೀರ್ಘಕಾಲದ ವರೆಗೆ ಇದ್ದರೆ ಹೊಸ ನ್ಯೂರಾನ್ ಗಳ ಮತ್ತು ಹೊಸ ನರಗಳ ಉತ್ಪಾದನೆಗೆ ಅಡ್ಡಿಯಾಗುತ್ತದೆ ಹೀಗಾಗಿ ಹೊಸ ವಿಷಯಗಳನ್ನು ಕಲಿಯಲು ಆಗುವುದಿಲ್ಲ  ಇನ್ನೊಂದು ಕಾರಣ ಎಂದರೆ ಡಿಪ್ರೆಶನ್ ಸುಮಾರು 40% ಜನರು ಇದರಿಂದಾಗಿ ಕಡಿಮೆ ನೆನಪಿನ  ಪ್ರಾಬ್ಲಂ ಗೆ ಒಳಗಾಗುತ್ತಾರೆ ಡಿಪ್ರೆಶನ್ ನಿಂದಾಗಿ ಹೊಸ ವಿಷಯಗಳ ಮೇಲೆ ತಮ್ಮ ಗಮನ ಹರಿಸಲು ಸಾಧ್ಯವಗುವುದಿಲ್ಲ ಡಿಪ್ರೆಶನ್ ಗೇ ಕಾರಣ ಮಿದುಳಲ್ಲಿ ಅಲ್ಲಿ ಕಡಿಮೆ ಸೆರೋಟೋನಿನ್ ಇರುವುದು  
ಹಿಂದೆ ಆದ ಕೆಟ್ಟ ಘಟನೆಗಳು ಮಿದುಲಲ್ಲಿ ಪದೆ ಪದೆ ಬರುವುದು ಈ ಡಿಪ್ರೆಶನ್ ನ ಲಕ್ಷಣ ಹೀಗಾಗಿ ಪ್ರೆಸೆಂಟ್ ಆಲ್ಲಿ ತಮ್ಮ ಗಮನವನ್ನು ಇರಿಸುವುದು ತುಂಬಾ ಕಷ್ಟವಾಗುತ್ತದೆ 
ಹಾರ್ಡ್ವರ್ಡ್ ಯೂನಿವರ್ಸಿಟಿ ವಿದ್ಯಾರ್ಥಿಗಳು ವಯಸ್ಸಾದವರ ಮೇಲೆ ತನಿಖೆ ಮಾಡಿದರು ಅದ್ರಲ್ಲಿ ಯಾರು ಸಮಾಜದಲ್ಲಿ ಬೇರತಿರಿತ್ತಾರೋ ಅವರ ನೆನಪಿನ ಶಕ್ತಿ ಚೆನ್ನಾಗಿತ್ತು ಇದಕ್ಕೆ ಕಾರಣ ಇನ್ನೂ ಸರಿಯಾಗಿ ಗೊತ್ತಿಲ್ಲವಾದರು ವಿಜ್ಞಾನಿಗಳ ಹೇಳುವಂತೆ  ಸಮಾಜದಲ್ಲಿ ಬರೆಯುವುದರಿಂದ ಮೆಂಟಲ್ ವರ್ಕೌಟ್ ಆಗುತ್ತೆ ಅಂತ ಹೇಳುತ್ತಾರೆ 
ಸೋ ಹೀಗೆ ನಿಮ್ಮ ಮೈಂಡ್ ಚೆನ್ನಾಗಿ ಕೆಲಸ ಮಾಡಬೇಕೆಂದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಒಂದು ನೀವು ಯಾವಾಗಲೂ ಚಟುವಟಿಕೆಯಿಂದ ಇರಲು ಪ್ರಯತ್ನಿಸಿ ಅಂದ್ರೆ ವ್ಯಾಯಾಮ ಇತರೆ ಕೆಲಸಗಳು ಇನ್ನೊಂದು ಒಳ್ಳೆಯ ಪ್ರೊಟೀನ್ ಯುಕ್ತ ಆಹಾರ ಸೇವಿಸಿ ಹಾಗೂ ನಿಮ್ಮ ಬ್ರೈನ್ ಅನ್ನು ಚಾಲೆಂಜ್ ಕಂಪ್ಲೀಟ್ ಮಾಡುವಂತೆ ಇರಿಸಿ ಉದಾರಾಣೆಗೆ  ಹೊಸ ಲಾಂಗ್ವೇಜ್ ಕಲಿಯುವುದು ಅಥವಾ ದಿನದಲ್ಲಿ ಟಾಸ್ಕ್ ಗಳನ್ನು ಹಾಕಿಕೊಂಡು ಆ ಟಾಸ್ಕ್ ಕಂಪ್ಲೀಟ್ ಮಾಡಿ ಹೀಗೇ ಪುಸ್ತಕ ಓದುವುದು ಹೀಗೆ ನಿಮ್ಮ ಮೈಂಡ್ ಅನ್ನು ಆರೋಗ್ಯವಾಗಿ ಇರಿಸಿಕೊಳ್ಳಬಹುದು 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

work from home jobs means ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಹಣ ಗಳಿಸುವ ವಿಧಾನ

how work in Flipkart and Amazon in kannada

how make karpur in kannada karpur business in kannada