stress ottada sick ಒತ್ತಡ ಜ್ವರ ತರುತ್ತದೆ ಹೇಗೆ ಗೊತ್ತಾ..??
ಸ್ಟ್ರೆಸ್, ಅಥವಾ ಒತ್ತಡ, ಇದು ಒಂದು ಫೀಲಿಂಗ್, ಮಾನವರು ಅಂದ ಮೇಲೆ ಎಲ್ಲಾರೂ ಇದನ್ನು ಅನುಭವಿಸುತ್ತಾರೆ, ಇದನ್ನು ಯಾವಾಗ ಅನುಭವಿಸುತ್ತಾರೆ ಅಂದ್ರೆ, ಯಾವಾಗ ನಾವು ಯಾವುದಾದ್ರೂ ಚಾಲೆಂಜ್ ಅನ್ನಿಸಿದ್ದನ್ನು ಯೋಚನೆ ಮಾಡಿದಾಗ, ಅಥವಾ ಚಾಲೆಂಜ್ ಎದುರಿಸುವಾಗ, ಈ ರೀತಿ ಒತ್ತಡ ಉಂಟಾಗುತ್ತದೆ, ಆದ್ರೆ ಇದು ಕೇವಲ ಒಂದು ಎಮೋಶನ್, ಅಥವಾ ದೇಹದ ಹಾರ್ಮೋನ್ ನ ಕಾರಣ, ಆಗಿರುತ್ತದೆ, ಒತ್ತಡ ಅನ್ನುವುದು, ದೇಹದ ಎಲ್ಲಾ ಭಾಗಗಳಲ್ಲಿ ಸಿಗ್ನಲ್ ನ ನರಗಳು ಇರುವುದರಿಂದ, ಹಾರ್ಮೋನ್ ಗಳು ಬಿಡುಗಡೆ ಆಗುತ್ತವೆ, ಕೆಲವೊಂದು ಸಮಯದಲ್ಲಿ ಇದು ಪ್ರಯೋಜನಕಾರಿಯಾಗಿದೆ, ಯಾಕಂದ್ರೆ ನೀವು ಯಾವುದಾದರೂ ಭಯವನ್ನು ಎದುರಿಸುತ್ತಿದ್ದರೆ, ಆಗ ನಿಮ್ಮಲ್ಲಿ ಒತ್ತಡದ ಹಾರ್ಮೋನ್ ಆದ ಅಡ್ರಿನಲಿನ್ ಉತ್ಪತ್ತಿ ಆಗುತ್ತದೆ, ಆಗ ನಮ್ಮ ದೇಹ ಫಾಸ್ಟ್ ಆಗಿ ಓಡುವುದು, ಅಥವಾ ಫೈಟ್ ಮಾಡಲು ಸಿದ್ದವಾಗುತ್ತದೆ, ಅಥವಾ ಕೆಲವೊಂದು ಸಮಯದಲ್ಲಿ ಏನು ಮಾಡದೆ ಸುಮ್ಮನೆ ಇರುವಂತೆ ಮಾಡುತ್ತದೆ, ಈ ಹಾರ್ಮೋನ್ ಬಿಡುಗಡೆ ಆದಾಗ ಬ್ಲಡ್ ಪ್ರೆಶರ್ ಜಾಸ್ತಿ ಆಗುತ್ತೆ, ಮತ್ತು ಹೃದಯ ಬಡಿತ ಜಾಸ್ತಿ ಆಗುತ್ತೆ, ಆದ್ರೆ ಇದು ದೀರ್ಘಾವಧಿಯಲ್ಲಿ ಸಂಭವಿಸಿದರೆ ದೇಹಕ್ಕೆ ಅನಾರೋಗ್ಯ ತರಬಹುದು,
ಇದು ನಿಮ್ಮ ಬ್ರೈನ್ ಗೆ ಮಾತ್ರ ಎಫೆಕ್ಟ್ ಮಾಡದೆ, ನಿಮ್ಮ ದೇಹದ ಅಂಗಾಂಶಗಳಿಗೆ ಎಫೆಕ್ಟ್ ಮಾಡುತ್ತದೆ,,
ನಿಮಗೆ ಒತ್ತಡ ಉಂಟಾದಾಗ, ಕಾರ್ಟಿಸೋಲ್, ಎಪಿನ್ಫ್ರಿನ್, ಮತ್ತು ನೊರ್ಪೈನ್ಫ್ರಿನ್, ಎಂಬ ಹಾರ್ಮೋನ್ ಬಿಡುಗಡೆ ಆಗಿ ಬ್ಲಡ್ ಗೆ ಸೇರುತ್ತವೆ, ಇವು ಬ್ಲಡ್ ಗೆ ಸೇರಿದಂತೆ, ಹೃದಯದ ನಾಳದ ಮೂಲಕ ಹೃದಯಕ್ಕೆ ಸೇರುತ್ತವೆ, ಇದರಿಂದ ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ, ಹೀಗಾಗಿ ಬ್ಲಡ್ ಪ್ರೆಶರ್ ಜಾಸ್ತಿ ಆಗುತ್ತದೆ, ಇದರಿಂದ ಹೈಪರ್ ಟೆನ್ಸ್ಷನ್ ಉಂಟಾಗುತ್ತದೆ, ಕಾರ್ಟಿಸೋಲ್ ಬ್ಲಡ್ ನರಗಳ ಒಳಗೆ ತೆಳುವಾದ ಲೈನ್ ಉಂಟು ಮಾಡುತ್ತದೆ, ಇದರಿಂದ ಬ್ಲಡ್ ಪ್ರೆಶರ್ ಜಾಸ್ತಿ ಆಗುತ್ತದೆ,
ವಿಜ್ಞಾನಿಗಳ ಸಂಶೋಧನೆಯ ಪ್ರಕಾರ, ಇದು ರಕ್ತನಾಳಗಳ ಇನ್ನರ್ ಲೈನ್ ಆದ, ಅಪಧಮನಿಕಾಠಿಣ್ಯ ದಿಂದ ಸ್ಟಾರ್ಟ್ ಆಗುತ್ತದೆ ಎಂದು ಹೇಳುತ್ತಾರೆ, ಹೀಗಾಗಿ ರಕ್ತನಾಳದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ಸಂಗ್ರಹ ಆಗುತ್ತದೆ, ಇದರಿಂದ ಹಾರ್ಟ್ ಅಟ್ಯಾಕ್ ಅಥವಾ ಸ್ಟ್ರೋಕ್ ಬರುವ ಸಾಧ್ಯತೆ ಇರುತ್ತದೆ, ನಿಮ್ಮ ಬ್ರೈನ್ ಯಾವಾಗ ಸ್ಟ್ರೆಸ್ ಅನ್ನು ಗುರುತಿಸುತ್ತದೆ, ಆಗ ಅದು ಆಟೋನಮೊಕ್ ನರ್ವಸ್ ಸಿಸ್ಟಂ ಅನ್ನು ಸಕ್ರಿಯ ಗೊಳಿಸುತ್ತದೆ, ಈ ನರ್ವಸ್ ಸಿಸ್ಟಂ ನ ಮೂಲಕ ನಿಮ್ಮ ಬ್ರೈನ್ ದೇಹಕ್ಕೆ ಸಿಗ್ನಲ್ ಕಳಿಸುತ್ತದೆ, ಹೀಗಾಗಿ ಹೊಟ್ಟೆಯಲ್ಲಿ ಚಿಟ್ಟೆಗಳನ್ನು ಬಿಟ್ಟ ಹಾಗೆ ಗುಳುಗುಲು ಅಂತಿರಿತ್ತದೆ,
ಹೀಗಾಗಿ ಬ್ರೈನ್ ಮತ್ತು ಕರುಳಿನ ನ್ಯಾಚುರಲ್ ಕನೆಕ್ಷನ್ ಡಿಸ್ಟರ್ಬ್ ಆಗುತ್ತದೆ, ಸೋ ತಿಂದ ಆಹಾರವು, ಜೀರ್ಣಕ್ರಿಯೆಯಲ್ಲಿ ಆಸಿಡ್ ಗೆ ಜಾಸ್ತಿ ಸೆನ್ಸ್ ಆಗಿ, ಒಂತರ ಉರಿಯೂತ ಅನುಭವ ಉಂಟಾಗುತ್ತದೆ, ಇದರಿಂದ ಹೃದಯದಲಿ ಕೂಡ ಉರಿಯೂತ ಅನುಭವ ಆಗುತ್ತಿರುತ್ತದೆ, ಹೀಗೆ ಬ್ರೈನ್ ಮತ್ತು ನಿಮ್ಮ ಜೀರ್ಣಾಂಗ ದ ಒತ್ತಡದ ಕನೆಕ್ಟಿವಿಟಿ ಯಿಂದ ಗುಡ್ ಬ್ಯಾಕ್ಟಿರಿಯ ಕೆಡಿಮೆ ಅಥವಾ ನಾಶ ಆಗಬಹುದು, ಇದರಿಂದ ದೇಹದ ಓವರ್ ಹಾಲ್ ಹೆಲ್ತ್ ಕೆಡುವ ಸಾದ್ಯತೆ ಇರುತ್ತದೆ,
ಹೀಗೆ ನೀವು ಜಾಸ್ತಿ ಒತ್ತಡಕ್ಕೆ ಒಳಗಾಗುತಿದ್ದರೆ, ಎನರ್ಜಿ ರಿಕವರಿ ಗೋಸ್ಕರ ಒತ್ತಡ ಉಂಟಾದಾಗ ಬಿಡುಗಡೆ ಆಗುವ ಕಾರ್ಟಿಸೋಲ್ ಹಾರ್ಮೋನ್ ಹಸಿವನ್ನು ಹೆಚ್ಚಿಸುತ್ತದೆ, ಹೀಗಾಗಿ ನೀವು ಆರಾಮದಾಯಕ ಆಹಾರವನ್ನು ಹಂಬಲಿಸುವಂತೆ ಮಾಡುತ್ತದೆ, ಇದರಿಂದ ಸ್ವಲ್ಪ ದಪ್ಪ ಆಗುವ ಸಾದ್ಯತೆ ಇರುತ್ತದೆ, ಹೀಗೆ ಇದರಿಂದ ಬೆಲ್ಲಿ ಫ್ಯಾಟ್ ಉಂಟಾಗುತ್ತದೆ, ಇದರಿಂದ ಇದು ಕೇವಲ ನಿಮ್ಮ ಪ್ಯಾಂಟ್ ಅನ್ನು ಸಣ್ಣದಾಗಿ ಮಾಡುವುದಿಲ್ಲ, ದೇಹದ ಇತರೆ ಅಂಗಾಂಶಗಳಿಗೆ ತೊಂದರೆ ಕೊಡುತ್ತದೆ, ಮತ್ತು ಹಾರ್ಟ್ ಗೆ ಸಂಬಂಧಪಟ್ಟ ಖಾಯಿಲೆ ಮಧು ಮೇಹ ದಂತ ಖಾಯಿಲೆಗೆ ಕಾರಣ ಆಗುತ್ತದೆ, ಹೀಗೆ ಒತ್ತಡದಲ್ಲಿ ಉಂಟಾಗುವ ಹಾರ್ಮೋನ್, ರೋಗ ನಿರೋಧಕ ಶಕ್ತಿ ಮೇಲೆ ಹಲವು ದಾರಿಗಳಿಂದ ಹಾನಿ ಮಾಡುತ್ತದೆ, ಮೂಲತಃ, ಈ ಸ್ಟ್ರೆಸ್ ಅಥವಾ ಒತ್ತಡ ಒಳ್ಳೆಯದೇ, ನಾವು ಯಾವುದಾದರೂ ಚಾಲೆಂಜ್ ಎದುರಿಸುವಾಗ, ನಮ್ಮ ದೇಹ ಫೈಟ್ ಗೆ ಸಿದ್ದಾವಾಗುವ ಹಾಗೆ ಮಾಡುತ್ತದೆ, ಮತ್ತು ಫೈಟ್ ಅಲ್ಲಿ ತೊಂದರೆ ಆದ ಮೇಲೆ ಅದು ಗುಣವಾಗಲು ಸಹಾಯ ಮಾಡುತ್ತದೆ, ಆದ್ರೆ ಇದು ಲಾಂಗ್ ಟೈಂ ಇದ್ದರೆ ಹಾನಿ ಆಗುತ್ತದೆ,
ಹೀಗಾಗಿ ,ನೀವು ಬಹಳ ದಿನಗಳ ಕಾಲ ಚೆನ್ನಾಗಿ ಬದುಕಬೇಕೆಂದರೆ ,ನೀವು ದೀರ್ಘ ಒತ್ತಡದ ಮೇಲೆ ಕಡಿವಾಣ ಹಾಕಬೇಕು, ಯಾಕಂದ್ರೆ,ಇದು ವಯಸ್ಸನ್ನು ನಿರ್ಧರಿಸುವ ಕ್ರೋಮೋಸೋಮ್ ನ ತುದಿ ಇದರೊಂದಿಗೆ ಸಂಬಂಧ ಹೊಂದಿರುತ್ತದೆ, ಈ ಕ್ರೋಮೋಸೋಮ್ ನ ತುದಿ ಜೀವಕೋಶಗಳನ್ನು ಕಾಪಿ ಮಾಡುತ್ತಿರುತ್ತದೆ, ಒಂದು ಹಳೇ ಸೆಲ್, ಅಥವಾ ಜೀವಕೋಶದಿಂದ ಹೊಸ ಸೆಲ್ ಗೆ ಅದರ ಜಿನ್ ಅಲ್ಲಿ ಯಾವುದೇ ಬದಲಾವಣೆ ಆಗದಂತೆ ನೋಡಿಕೊಂಡು ಹೊಸ ಜೀವಕೋಶವನ್ನು ಕಾಪಿ ಮಾಡುತ್ತಿರುತ್ತದೆ, ಆದರೆ ಈ ಕ್ರೋಮೋಸೋಮ್ ನ ತುದಿಗಳು, ಸಣ್ಣದಾಗುತ್ತ ಬಂದರೆ, ಹೊಸ ಜೀವಕೋಶಕ್ಕೆ ಕಾಪಿ ಆಗದೆ, ಆ ಸೆಲ್ ಸಾಯುತ್ತದೆ, ಹೀಗೆ ಸೆಲ್ ಗಳು ಬೇಗ ಸಣ್ಣದಾಗುತ್ತ ಬಂದಂತೆ, ಬೇಗ ವಯಸ್ಸು ಆಗುತ್ತದೆ, ಸೋ ಹೀಗಾಗಿ ಶಾರ್ಟ್ ಟೈಂ ಅಲ್ಲಿ ಸ್ಟ್ರೆಸ್ ಅನ್ನು ಎದುರಿಸಿ, ಲಾಂಗ್ ಟೈಂ ಚೆನ್ನಾಗಿ ಇರಿ,