dipression pill
1950 ರಲ್ಲೀ ಎರೆಡು ಹೊಸ ರೀತಿಯ ಮಾತ್ರೆಗಳನ್ನು ಕಂಡು ಹಿಡಿಯುತ್ತಾರೆ, ಇವುಗಳನ್ನು, ಅವರು ಕ್ಷಯ ರೋಗದ ವಿರುದ್ಧ ಹೋರಾಡಲು, ಕಂಡು ಹಿಡಿದರು
1952 ರಲ್ಲಿ ರೋಗಿಗಳ ಮೇಲೆ ಪ್ರಯೋಗಿಸಿದಾಗ ಈ ಔಷಧಗಳು ಕೇವಲ ಕ್ಷಯರೋಗವನ್ನ ಗುಣಪಡಿಸುವುದರ ಜೊತೆಗೆ ಪೇಷಂಟ್ ನ ಮೂಡ್ ಅನ್ನು ಸುಧಾರಿಸುವುದನ್ನು ಗಮನಿಸುತ್ತಾರೆ, ಆ ಎರಡು ಮಾತ್ರೆಗಳಲ್ಲಿ ಇಪ್ರೋನೈಜಿಡ್ ಕೂಡ ಒಂದು, ಇದಕ್ಕಿಂತ ಮೊದಲು ವಿಜ್ಞಾನಿಗಳು ಮನಸ್ಸನ್ನು ಸುಧಾರಿಸಲು ಸೈಕೋಥೆರಪಿ ಅನ್ನು ಮಾತ್ರ ನಂಬಿಕೊಂಡಿದ್ದರು ಆದ್ರೆ ಈ ಮಾತ್ರೆಗಳು ಮೂಡ್ ಅನ್ನು ಸುಧಾರಿಸುವುದನ್ನ ಕಂಡು ಮಾತ್ರೆಗಳಿಂದ ಲು ಕೂಡ ಮಾನಸಿಕ ಖಿನ್ನತೆ ಅನ್ನು ಕಡಿಮೆ ಮಾಡಬಹುದು ಎಂದು ಯೋಚಿಸುತ್ತಾರೆ
ಇದೆ ರೀತಿ ಇನ್ನೊಂದು ಮಾತ್ರೆಯಾದ ಇಮಿಪ್ರಮೈನ್ ಇದೊಂದು ಅಲರ್ಜಿಯ ವಿರುದ್ಧ ಹೋರಾಡಲು ಕಂಡು ಹಿಡಿಯಲಾಯಿತು ಈ ಮಾತ್ರೆಯನ್ನು 1956 ರಲ್ಲಿ ಸ್ವಿಸ್ ವೈದ್ಯರು ಇದರ ಟ್ರೈಯಲ್ ಮಾಡಬೇಕಾದರೆ ಈ ಮಾತ್ರೆ ತೆಗೆದು ಕೊಂಡವರ ಮೂಡ್ ಸುಧಾರಿಸುವುದನನ್ನು ಗಮನಿಸಿದರು
ಈ ಎರೆಡು ಮಾತ್ರೆಗಳು ಮಿದುಳಿನ ಮೊನೊಅಮೈನ್‌ಗಳು ಎಂಬ ನರಪ್ರೆಕ್ಷಕಗಳ ಮೇಲೆ ಪರಿಣಾಮ ಬೀರುವುದನ್ನು ಗಮನಿಸಿದರು ಇದರಿಂದ ಮಿದುಳಿನ ಕೆಮಿಸ್ಟ್ರಿ ಅಸಮತೋಲನ ಸಿದ್ಧಾಂತ ಹುಟ್ಟಿಕೊಂಡಿತು
ಈ ಮಾತ್ರೆಗಳು ಮಿದುಳಿನ ಮೊನೊಅಮೈನ್‌ಗಳ ಕೊರತೆಯನ್ನು ಸರಿದೂಗಿಸುವ ಮೂಲಕ ಮೂಡ್ ಅನ್ನು ಸುಧಾರಿಸುತ್ತಿದ್ದವು
ಆದರೆ ಈ ಮಾತ್ರೆಗಳು ಹಲವಾರು ಅಡ್ಡ ಪರಿಣಾಮಗಳನ್ನು ಒಳಗೊಂಡಿತ್ತು ತಲೆನೋವು, ಅರಿವಿನ ಕೊರತೆ, ಮರೆವು ಇನ್ನೂ ಸಾಕಷ್ಟು ಅಡ್ಡ ಪರಿಣಾಮ ಹೊಂದಿದ್ದವು ಹೀಗಾಗಿ ವಿಜ್ಞಾನಿಗಳು ಈ ಮಾತ್ರೆಗಳನ್ನು ಸುಧಾರಿಸಲು ಇವುಗಳ ಮೇಲೆ ಅಧ್ಯಯನ ಕೈಗೊಂಡರು ಇವುಗಳು ಮೆದುಳಿನ ಯಾವ ಮೊನೊಅಮೈನ್‌ಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಕೈಗೊಂಡರು ಆಗ ಸಿರೋಟಿನ್ ಎಂಬ ಮೊನೊಅಮೈನ್ ಮೇಲೆ ಪರಿಣಾಮ ಬೀರುವುದನ್ನು ಗಮನಿಸಿದರು ಹೀಗೆ ಈ ಅಧ್ಯಯನದಿಂದ 1988 ರಲ್ಲಿ ಫ್ಲುಯೊಕ್ಸೆಟೈನ್ ಅಥವಾ ಪ್ರೊಜಾಕ್ ಹುಟ್ಟಿಕೊಳ್ಳಲು ಕಾರಣ ಆಯ್ತು ಅದರ ಮೊದಲ ಕ್ಲಾಸ್ ಮಾತ್ರೆ ಸಿರೊಟೋನಿನ್ ರಿಅಪ್ಟೇಕ್ ಇನ್ಹಿಬಿಟರ್ಗಳು, ಅಥವಾ SSRI ಎಂಬ ಮಾತ್ರೆಗಳ ಹುಟ್ಟಿಕೊಂಡವು
ಇವು ಮಿದುಳಿನಲ್ಲಿ ಸಿರೋಟಿನಿನ್ ಅಂಶ ಮರು ಹಿರಿಕೊಳ್ಳುವಿಕೆ ಅನ್ನು ತಡೆಗಟ್ಟಿ ಸಿರೊಟೋನಿನ್ ಅನ್ನು ಹೆಚ್ಚು ಮಾಡುವ ಮೂಲಕ ಮೂಡ್ ಚೆನ್ನಾಗಿರಲು ಸಹಾಯ ಮಾಡುತ್ತದೆ ಇದು ಅಳೆ ಮಾತ್ರೆಗಿಂತ ಕಡಿಮೆ ಅಡ್ಡ ಪರಿಣಾಮ ಹೊಂದಿತ್ತು ಹೀಗೆ Prozac ಚೆನ್ನಾಗಿ ಕೆಲಸ ಮಾಡಿದ್ದರಿಂದ ವೈದ್ಯರು ಇದನ್ನು ಮಾರಾಟ ಮಾಡಲು ಮುಂದಾದರು ಖಿನ್ನತೆಯ ಬಗ್ಗೆ ಹೇಳುವ ಮೂಲಕ
ಹಾಗೂ ಮಾನವನ ಕಂಟ್ರೋಲ್ ಗೂ ಮೀರಿ ಖಿನ್ನತೆ ಅಥವಾ ಡಿಪ್ರೆಶನ್ ಉಂಟಾಗುತ್ತದೆ ಎಂದು ಮನವರಿಕೆ ಮಾಡುವ ಮೂಲಕ ಮಾತ್ರೆಗಳನ್ನು ಹೆಚ್ಚು ಮಾರಾಟ ಮಾಡಿದರು ಜನರು ಕೂಡ ಸಹಾಯ ಪಡೆದರು 1990 ರ ಹೊತ್ತಿಗೆ ಮಾನಸಿಕ ಒತ್ತಡದಿಂದ ವಿಮುಕ್ತಿ ಪಡೆಯಲು ಈ ಮಾತ್ರೆಗಳನ್ನು ಬಳಸುವ ಜನರು ಹೆಚ್ಚಾದರು ಮೊದಲು ಇದ್ದ ಸೈಕೊ ಥೆರಪಿ ಮತ್ತು ಮಾನಸಿಕ ಚಿಕಿತ್ಸೆ ಮರೆಯಾಗುತ್ತ ಬಂದವು ಇದರಿಂದ ವೈದ್ಯರು ಬರಿ ಈ ಮಾತ್ರೆಗಳು ಕೆಲವು ಜನರ ಮೇಲೆ ಪರಿಣಾಮ ಬೀರುವುದಿಲ್ಲ ಹಾಗಾಗಿ ಮಾನಸಿಕ ಥೆರಪಿ ಮತ್ತು ಈ ಮಾತ್ರೆ ಎರೆಡು ಒಟ್ಟಿಗೆ ತೆಗೆದುಕೊಂಡರೆ ಉತ್ತಮ ಎಂದು ತಮ್ಮ ಅಭಿಪ್ರಾಯ ತಿಳಿಸಿದರು
ಇಷ್ಟೆಲ್ಲ ಸಂಶೋಧನೆ ಆದ್ರೂ ಈ ಮಾತ್ರೆಗಳನ್ನು ಸೇವಿಸಿದ ಕೂಡಲೇ ಇವು ಯಾಕೆ ಮಿದುಳಿನ ನರಗಳ ಮೇಲೆ ಪರಿಣಾಮ ಬೀರುತ್ತವೆ ಹಾಗೂ ಯಾಕೆ ಖಿನ್ನತೆ ಉಂಟಾಗುತ್ತದೆ ಎನ್ನುವುದನ್ನು ನಿಖರವಾಗಿ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ
ಮತ್ತೆ ಕೆಲವು ಜನರು ಈ ಮಾತ್ರೆಗಳನ್ನು ಸೇವಿಸಿದಾಗ ವಾರ ಕಳೆದರೂ ಈ ಮಾತ್ರೆಗಳ ಪರಿಣಾಮ ಅನುಭವಿಸುವುದಿಲ್ಲ ಮತ್ತು ಕೆಲವು ಜನರು ಈ ಮಾತ್ರೆಗಳನ್ನು ತೆಗೆದುಕೊಂಡ ನಿಮಿಷಗಳಲ್ಲೇ ಇವು ಅವರ ಮೇಲೆ ಪರಿಣಾಮ ಬೀರುತ್ತವೆ ಮತ್ತೆ ಎಂದಿಗೂ ಖಿನ್ನತೆ ಅನುಭವಿಸುವುದಿಲ್ಲ ಮಿದುಳಿನ ಕೆಮಿಸ್ಟ್ರಿ ಸಿದ್ಧಾಂತ ಅಪೂರ್ಣವಾಗಿ ಉಳಿದಿದೆ ಇವು ಒಂತರ ಕೊ ಇನ್ಸಿಡೆಂಟ್ ಥರಾ ಆಗುತ್ತಿವೆ ಎಂದು ಹೇಳಬಹುದು
ಸೆರೋಟೋನಿನ್ ರಾಸಾಯಿನಿಕ ಕಡಿಮೆ ಆಗುವುದರಿಂದ ಖಿನ್ನತೆ ಉಂಟಾಗುತ್ತದೆ ಎನ್ನುವುದು ಅಸಮಂಜಸ ಆಗಿದೆ ಆದ್ರೆ ಈ ಮಾತ್ರೆಗಳು ಸೆರೋಟೋನಿನ್ ಮೇಲೇನೆ ಕೆಲಸ ಮಾಡುತ್ತವೆ ಇದು ವಿಚಿತ್ರ ಎನಿಸಿದರೆ ಈ ಮುಂದಿನ ಸಿಂಪಲ್ ಎಕ್ಸಾಂಪಲ್ ನೋಡಿ ಒಬ್ಬ ವ್ಯಕ್ತಿಗೆ ಸ್ಕಿನ್ ಅಲರ್ಜಿ ಗಾಗಿ ಸ್ಟೀರಾಯ್ಡ್ ಕ್ರೀಮ್ ಅನ್ನು ಹಚ್ಚಲಾಗುತ್ತದೆ ಆಗ ಆ ಅಲರ್ಜಿ ಉಂಟಾಗಿರುವುದು ಸ್ಟೀರಾಯ್ಡ್ ಕೊರತೆಯಿಂದ ಎಂದು ಹೇಳಲು ಸಾಧ್ಯವಿಲ್ಲ