green chilli powder ಮಾಡುವುದು ಹೇಗೆ ಯಾಕಂದ್ರೆ 1 ಕೆಜಿ ಚಿಲ್ಲಿ ಪೌಡರ್ ಗೆ 900 ರು ಲಾಭ ಬರುತ್ತೆ
ಹಾಯ್ ಫ್ರೆಂಡ್ಸ್ ಗ್ರೀನ್ ಚಿಲ್ಲಿ ಪೌಡರ್ ಅನ್ನು ಹೇಗೆ ಮಾಡುವುದು ಮತ್ತು ಹೇಗೆ ಮಾರ್ಕೆಟಿಂಗ್ ಮಾಡುವುದು ಎಂಬ ಮಾಹಿತಿ ವಿವರಿಸಲಾಗಿದೆ
1. ಲಾಭ ಹೇಗೆ ಮತ್ತು ಎಷ್ಟು ಸಿಗುತ್ತೆ
2 ಕೆಜಿ ಹಸಿಮೆಣಸಿನಕಾಯಿಯಿಂದ 1 ಕೆಜಿ ಪೌಡರ್ ಅನ್ನು ತೆಗೆಯಬಹುದು
ಆದ್ರೆ 1 ಕೆಜಿ ಗ್ರೀನ್ ಚಿಲ್ಲಿ ಪೌಡರ್ ಗೆ 1000 ರೂಪಾಯಿ
ಫ್ರೆಂಡ್ಸ್ ನೀವು 2 ಕೆಜಿ ಹಸಿ ಮೆಣಸಿನಕಾಯಿಯನ್ನು 80 ರುಗೆ ತಗೊಂಡ್ರೆ ಅದ್ರಲ್ಲಿ ಪ್ಯಾಕಿಂಗ್ ಕವರ್ ಹಾಗೂ ಕರೆಂಟ್ ಎಲ್ಲಾ ಸೇರಿ 20 ರು ಒಟ್ಟಾರೆಯಾಗಿ 100 ಆಗುತ್ತೆ
ಅದೇ 1 ಕೆಜಿ ಚಿಲ್ಲಿ ಪೌಡರ್ ಅನ್ನು ಮಾರಿದರೆ 100 ರೂ ಕರ್ಚು ತೆಗೆದು 900 ರು ಲಾಭ ಆಗುತ್ತೆ
2. ಹೇಗೆ ಮಾಡುವುದು
ನೀವು ಹಸಿಮೆಣಸಿನಕಾಯಿಯ ತುಂಬನ್ನು ತೆಗೆದು ಎರೆಡು ಭಾಗಗಳಾಗಿ ಮಾಡಿ 48 ಗಂಟೆಗಳ ಕಾಲ ಒಣಗಿಸಿ ಇಡಬೇಕಾಗುತ್ತದೆ ತದನಂತರ ನಿಮ್ಮ ಮಿಕ್ಸಿ ಗಳಲ್ಲಿ ಅದನ್ನು ಪುಡಿ ಮಾಡಿ ಪ್ಯಾಕ್ ಮಾಡಬಹುದು
ಇದಕ್ಕೆ ಪ್ಯಾಕಿಂಗ್ ಕವರ್ ಗಳು ಸಿಗುತ್ತವೆ 200ಗ್ರಾಂ 500 ಗ್ರಾಂ ಮತ್ತೆ ನೀವು ಸಣ್ಣ ಡಬ್ಬ ಗಳನ್ನ್ನು ಸಹ ಬಳಸಬಹುದು
ದೊಡ್ಡ ಕಿರಾಣಿ ಅಂಗಡಿಗಳಲ್ಲಿ ಪೀಪಿ ಕವರ್ ಅಂತ ಕೇಳಿದರೆ ಕೊಡ್ತಾರೆ
ಇದಕ್ಕೆ ನೀವು ಫುಡ್ ಸೇಫ್ಟಿ ಡಿಪಾರ್ಟ್ಮೆಂಟ್ ನಿಂದಾ ಲೈಸೆನ್ಸ್ ಪಡೆಯಬೇಕಾಗುತ್ತದೆ ಹೇಗೆ ಪಡೆಯುವುದು ಅಂತ ಗೊತ್ತಿಲ್ಲ ಅಂದ್ರೆ ಕಾಮೆಂಟ್ ಆಲ್ಲಿ ಗೊತ್ತಿಲ್ಲ ಅಂತ ತಿಳಿಸಿ ನಾನು ಅದರ ಬಗ್ಗೆ ವೀಡಿಯೋ ಮಾಡುತ್ತಾನೆ
3. ಮಾರ್ಕೆಟಿಂಗ್ ಹೇಗೆ ಮಾಡುವುದು
ನೀವು ದೊಡ್ಡ ಕಿರಾಣಿ ಅಂಗಡಿಗಳ ಹತ್ತಿರ ಹೋಗಿ ಕೊಡಬಹುದು ಹಾಗೆಯೇ ನಿಮ್ಮ ಹತ್ತಿರದ ಫಾಸ್ಟ್ ಫುಡ್ ಸೆಂಟರ್ ಬಳಿ ಹೋಗಿ ಕೊಟ್ಟು ಆರ್ಡರ್ ತೆಗೆದು ಕೊಳ್ಳಬಹುದು
ಮೇನ್ ಆಗಿ ಗೋಬಿ ಮಂಚೂರಿ ಎಗ್ ರೈಸ್ ಅಂಗಡಿ ಕಿರಾಣಿ ಸ್ಟೋರ್ ಗಳಿಗೆ ಭೇಟಿ ನೀಡಿ ನಿಮ್ಮ ಪ್ರಾಡಕ್ಟ್ ಬಗ್ಗೆ ಹೇಳಿ ಸ್ಟಾರ್ಟಿಂಗ್ ಅಲ್ಲಿ ಆದಷ್ಟು ಕಡಿಮೆ ಬೆಲೆಗೆ ಕೊಡಿ