ನೀವು ಯಾವಾಗಲೂ ನಿಮ್ಮ ವರ್ಕ್ ಅನ್ನು ಮುಂದುದುತಿದ್ದಿರಾ..? ಅಸಲಿ ಕಾರಣ ಇಲ್ಲಿದೆ
ಈಗ ಬೆಳಿಗ್ಗೆ 5 ಗಂಟೆ ಆಗಿದೆ ಅಂದುಕೊಳ್ಳಿ, ಆಗ ನಿಮಗೆ ಗೊತ್ತಾಗುತ್ತದೆ ಇವಾಗ ನಾನು ನನ್ನ ಕೆಲಸವನ್ನು ಮಾಡಬೇಕಿದೆ ಆದ್ರೆ ಮೂಡ್ ಬರುವುದಿಲ್ಲ ನಾಳೆಗೆ ಮುಂದೂಡಿಕೆ ಮಾಡುತ್ತೀರಾ ಹೀಗೆ ನಾಳೆ ಬೆಳಿಗ್ಗೆ ಆಗುತ್ತದೆ ಆಗ ನಿಮ್ಮ ಕೆಲ್ಸ ಮಾಡಲು ಕಂಪ್ಯೂಟರ್ ಓಪನ್ ಮಾಡುತ್ತೀರಾ ಅದು ಹೇಗೋ ನಿಮ್ಮ ಮೊಬೈಲ್ ಫೋನ್ ಅನ್ನು ಎತ್ತಿಕೊಳ್ಳುತ್ತಿರಾ ಬಹುಶಃ ನೀವು ನಿಮ್ಮ ಫೇವರಿಟ್ YouTube ಚಾನೆಲ್ ಗೆ ಹೋಗಬಹುದು ಇಲ್ಲ ಅಂದ್ರೆ ನೀವು ನೀವು ಮೊದಲು ಊಟ ಮಾಡೋಣ ಎಂದು ಯೋಚಿಸಬಹುದು ಯಾಕಂದ್ರೆ ನೀವು ಅಡುಗೆ ಮಾಡುವುದನ್ನು ಇಷ್ಟ ಪಡುತ್ತಿರಾ ಅದ್ಕೆ ಇಷ್ಟೆಲ್ಲಾ ನಿಮ್ಮ ಮಿದುಳಲ್ಲಿ ಯಾಕೆ ಬರುತ್ತದೆ ಎಂದರೆ ನೀವು ನಿಮ್ಮ ವರ್ಕ್ ಜೊತೆ ಎಂಜಾಯ್ ಮಾಡಲು ನಿಮ್ಮ ಮಿದುಳಿಗೆ ಆಗುತ್ತಿಲ್ಲ
ಹಾಗೆ ನಂತರ ಗೊತ್ತಾಗುತ್ತದೆ ನಿಮ್ಮ ಕೆಲ್ಸ ಮಾಡಲು ತುಂಬಾ ಲೆಟ್ ಆಗೋಯ್ತು ಅಂತ ಹೇಳಿ ಮತ್ತೆ ನೀವು ನಿಮ್ಮ ಕೆಲಸ ಮಾಡಲು ಶುರು ಮಾಡಲು ಪ್ರತ್ನಿಸುತ್ತಿರ
ಮತ್ತೆ ನೆಕ್ಸ್ಟ್ ಮಾರ್ನಿಂಗ್ ಅದೇ ರೀತಿ ಕೆಲವನ್ನು ವಿಳಂಬ ಮಾಡುತ್ತೀರಾ
ಆದ್ರೂ.. ಇದು ಕೆಟ್ಟ ಅಭ್ಯಾಸ ಅಂತ ಗೊತ್ತಿದ್ದೂ ಯಾಕೆ ವಿಳಂಬ ಎಂಬುದನ್ನು ಬಿಡಲಾಗುವುದಿಲ್ಲ
ಇದಕ್ಕೆ ಕಾರಣ ಮುಂದುಡಿಕೆಯನ್ನು ನಾವು ಅಭ್ಯಾಸ ಮಾಡಿಕೊಂಡಿರುವುದು
ಇದನ್ನು ಹೋಗಲಾಡಿಸಲು ಬೇಕಿರುವುದು ಟೈಂ ಮ್ಯಾನೇಜ್ಮೆಂಟ್ ಯಾವ ಟಾಸ್ಕ್ ಇಂಪಾರ್ಟೆಂಟ್ ಆಗಿದೆ ಎಂಬುದನ್ನು ಡಿಸೈಡ್ ಮಾಡಬೇಕು
ಮತ್ತೆ ಯಾವುದನ್ನು ವೈಟಿಂಗ್ ಲಿಸ್ಟ್ ಆಲ್ಲಿ ಇಡಬೇಕು ಎಂಬುದನ್ನು ನಿರ್ಧರಿಸಬೇಕು
ಯಾವುದೇ ಒಳ್ಳೆಯ ರಿಸನ್ ಇಲ್ಲದೆ
ನಾಳೆ ಮಾಡಿದರಾಯಿತು ಅಂತ ನೀವು ನಿಮ್ಮ ವರ್ಕ್ ಅನ್ನು ಮುಂದೂಡುತ್ತಿದರೆ
ಅದಕ್ಕೆ ಕಾರಣ ಆ ವರ್ಕ್ ಅನ್ನು ನಾವು ಮಾಡಲು ಹೊರಟಾಗ ಏನೋ ನೆಗೆಟಿವ್ ಫೀಲಿಂಗ್ಸ್ ಬರೋದು ಕೂಡ ಇದಕ್ಕೆ ಕಾರಣ ಹೀಗಾಗಿ ಆ ವರ್ಕ್ ನಿಮಗೆ ಏನೋ ತೊಂದರೆ ಮಾಡುತ್ತಿದೆ ಎಂದು ನಿಮ್ಮ ಮಿದುಳು ಭಾವಿಸುತ್ತದೆ ಹೀಗಾಗಿ ಇಂಡೈರೆಕ್ಟ್ ಆಗಿ ನಮ್ಮನ್ನು ರಕ್ಷಿಸಲು ನಮ್ಮ ಮಿದುಳು ಪ್ರಯತ್ನಿಸುತ್ತದೆ
ಯಾವಾಗ ನಿಮಗೆ ಗೊತ್ತಾಗುತ್ತದೆ ಆ ವರ್ಕ್ ಅನ್ನ ಮಾಡಲೇಬೇಕು ಎಂದು ಆಗ ನಮ್ಮ ಮಿದುಳು ಏನೋ ದೇಹಕ್ಕೆ ತೊಂದರೆ ಮಾಡುವ ಡೇಂಜರ್ ಬರುತ್ತಿದೆ ಎಂದು ಭಾವಿಸುತ್ತದೆ ನಿಮ್ಮ ಮಿದುಳಲ್ಲಿ ಇರುವ amygdala ಎಂಬ ನರಗಳ ಸಮೂಹ ಎಮೋಶನ್ ಪ್ರೋಸೆಸ್ ಮಾಡುತ್ತಿರುತ್ತದೆ ಹೀಗಾಗಿ ಇದು ಡೇಂಜರ್ ಅನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿರುತ್ತದೆ ಹೀಗಾಗಿ ಏನಾದರೂ ಡೇಂಜರ್ ಬರುತ್ತಿದೆ ಅಂತ ಗೊತ್ತಾದರೆ ಅಡ್ರಿನಲಿನ್ ಎಂಬ ಹಾರ್ಮೋನ್ ಅನ್ನು ಭಯದ ಅಥವಾ ಡೇಂಜರ್ ನ ವಿರುದ್ಧ ಹೋರಾಡಲು ಬಿಡುಗಡೆ ಮಾಡುತ್ತದೆ ಇದು ಬಿಡುಗಡೆ ಆದಾಗ ನೀವು ಉದ್ವೇಗ ಅಥವಾ ಪ್ರಚೋದನೆ ಗಳಿಗೆ ಒಳ್ಗಾಗುತ್ತಿರ ಹೀಗಾಗಿ ನಿಮ್ಮ ಮಿದುಳಿನ ಮುಂಬಾಗದಲ್ಲಿ ಇರುವ ಪ್ರಿ ಫ್ರಂಟಲ್ ಕಾರ್ಟೆಕ್ಸ್ ನಲ್ಲಿ ಉದ್ವೇಗ ಉಂಟಾಗ ತೊಡಗುತ್ತದೆ
ಈ ರೀತಿ ಆಗುವುದರಿಂದ ನೀವು ಬಹಳ ಹೊತ್ತು ಯೋಚಿಸುವ ಮೂಲಕ ನಿಮ್ಮ ಎಮೋಶನ್ ಅನ್ನು ಕಂಟ್ರೋಲ್ ಮಾಡಲು ಸಹಾಯ ಮಾಡುತ್ತದೆ ಹೀಗಾಗಿ ನೀವು ಯಾವುದೇ ರೆಸ್ಪಾನ್ಸ್ ಮಾಡದೆ ಯೋಚಿಸುವ ಆಗೆ ಮಾಡುತ್ತದೆ ನೀವು ಆ ನಿಮಗೆ ಇಷ್ಟ ಇರುವ ಕೆಲಸ ಮಾಡುವುದರ ಮೂಲಕ ಇಷ್ಟ ಆಗದೆ ಇರುವ ಕೆಲವನ್ನು ಅವೈಡ್ ಮಾಡಲು ಪ್ರಾರಂಭ ಮಾಡುತ್ತೀರಾ
ಇಷ್ಟೆಲ್ಲಾ ಆಗುವುದರಿಂದ ಇದು ನಿಮಗೆ ದೊಡ್ಡ ಭಯದ ರೆಸ್ಪಾನ್ಸ್ ರೀತಿ ಕಾಣುತ್ತದೆ ಆದರೆ ಇದು ಬರೀ ನಿಮ್ಮ ಬ್ರಮೆ ಆಗಿರುತ್ತದೆ ಯಾವುದೇ ದೊಡ್ಡ ಅಟ್ಯಾಕ್ ಆಗಿರುವುದಿಲ್ಲ ,
ಎಲ್ಲಾ ಜನರು, ತಮ್ಮ ಇಷ್ಟ ಇಲ್ಲದ ಕೆಲಸವನ್ನು ಮುಂದೂಡುತ್ತಲೇ ಬರುತ್ತಾರೆ ,ಅದ್ಕೆ ಕಾರಣ ನಾವು ಆ ಕೆಲಸ ಮಾಡಲು ಹೊರಟಾಗ, ನಮ್ಮ ಮಿದುಳಲ್ಲೀ ಬರುವ ನೆಗೆಟಿವ್ ಫೀಲಿಂಗ್ಸ್ ,ಅವುಗಳೆಂದರೆ ಭಯ ,ಅಭದ್ರತೆ, ಅಸಮರ್ಥತೆ , ಕೀಳರಿಮ,
ಒಂದು ಸ್ಟಡಿ ಪ್ರಕಾರ, ಯಾವುದೇ ಕೆಲಸ ವನ್ನು ಕಷ್ಟ ಎಂದು ಮುಂದುಡುವುದರಂದ, ಮತ್ತಷ್ಟು ಈ ಮುಂದುಡುವಿಕೆ ನಮಗೆ ಗೊತ್ತಿಲ್ಲದೆ ಹೆಚ್ಚು ಆಗುತ್ತಿರುತ್ತದೆ ,
ಒಂದು ಸಂಶೋಧನೆ ಪ್ರಕಾರ, ಕೆಲವು ವಿದ್ಯಾರ್ಥಿಗಳಿಗೆ ಒಂದು ದಿನದಲ್ಲಿ ಒಂದಿಷ್ಟು ಟೈಂ ಟೇಬಲ್ ಹಾಕಿ ಆ ಟೈಂ ಅಲ್ಲಿ ಮಾತ್ರ ಓದಬೇಕು ಇನ್ನೂ ಉಳಿದೆಲ್ಲ ಟೈಂ ಅಲ್ಲಿ ಆಟ ಆಡಬಹುದು ಎಂದು ಫಿಕ್ಸ್ ಮಾಡಿದರು, ಹೀಗೆ ಓದಿದ ನಂತರ, ವಿದ್ಯಾರ್ಥಿಗಳಿಗೆ ಇದರ
ಬಗ್ಗೆ ಕೇಳಿದಾಗ, ಇದು ಒಳ್ಳೆಯ ಉಪಾಯ, ಮತ್ತು ಒಳ್ಳೆಯ ಭಾವನೆಯಿಂದ ತೃಪ್ತಿಯಾಗಿ ಓದಿದೇವು, ಒತ್ತಡ ಇರಲಿಲ್ಲ, ಎಂದು ಹೇಳಿದರು,
ಆದರೆ, ವಿದ್ಯಾರ್ಥಿಗಳು ಯಾವಾಗ ಇದು ಒತ್ತಡ ಎಂದುಕೊಂಡು ಕೆಲಸವನ್ನು ಮುಂದುದುತ್ತಾರೋ, ಆಗ ಆ ಕೆಲಸವನ್ನು ಸ್ಟಾರ್ಟ್ ಮಾಡುವುದು ತುಂಬಾ ಕಷ್ಟವಾಗುತ್ತದೆ, ಯಾಕಂದ್ರೆ ಕೆಲಸದ ಮುಂದುಡುವಿಕೆ ಅನ್ನೋದು,
ನೆಗೆಟಿವ್ ಫೀಲಿಂಗ್ಸ್ ನಿಂದಾ ಹೆಚ್ಚಾಗುತ್ತದೆ, ಕೆಲವು ವ್ಯಕ್ತಿಗಳು ಇತರರಿಗಿಂತ ಇದಕ್ಕೆ ಹೆಚ್ಚು ಒಳಗಾಗುತ್ತಾರೆ , ಅವರು ಎಷ್ಟೇ ಟೈಂ ಮ್ಯಾನೇಜ್ಮೆಂಟ್ ಮಾಡುವ ವ್ಯಕ್ತಿ ಆಗಿದರು ಸಹ,
ಯಾರು ಹೆಚ್ಚು ಇಮೋಶನ್ ಭಾವನೆಗಳಿಗೆ ಒಳಗಾಗುತ್ತಾರೆ, ಮತ್ತು ಆತ್ಮಗೌರವ ಯಾರಲ್ಲಿ ಕಡಿಮೆ ಇರುತ್ತದೆಯೋ, ಅವರು ಈ ರೀತಿ ಕೆಲಸದ ಮುಂದುಡುವಿಕೆಯಲ್ಲಿ ತಲ್ಲೀನರಾಗಿದ್ದು, ಏನು ಸಾಧನೆ ಮಾಡುವುದಿಲ್ಲ ಒಂದು ಸಾಮಾನ್ಯ ತಪ್ಪು ತಿಳುವಳಿಕೆ ಎಂದರೆ ,ಎಲ್ಲಾ ಕೆಲಸ ಮುಂದೂಡಿಕೆ ವ್ಯಕ್ತಿಗಳು ಸೋಮಾರಿಗಳಾಗಿರುತ್ತಾರೆ ಎನ್ನುವುದು,
ಸೋಮಾರಿತನ ಉಂಟಾಗುವುದು ದೇಹ ಮತ್ತು ಮಿದುಳಿನಲ್ಲಿ ಎನರ್ಜಿ ಇಲ್ಲದಿದ್ದಾಗ, ಮತ್ತು ಸಾಮಾನ್ಯ ನಿರಾಸಕ್ತಿಯಿಂದ ,
ಮುಖ್ಯವಲ್ಲದ ಕೆಲಸದಿಂದ ನಿಮ್ಮನ್ನು ನಾಶಪಡಿಸಿಕೊಳ್ಳುವುದಕ್ಕಿಂತ
ನೀವು ಸೊಮ್ಮಾರಿಯಾಗಿದ್ದಾಗ ನೀವು ಏನನ್ನೂ ಮಾಡದೆ ಕುಳಿತುಕೊಳ್ಳುವ ಸಾಧ್ಯತೆಯಿದೆ.
ವಾಸ್ತವವಾಗಿ ಅನೇಕ ಜನರು ಕೆಲಸದ ದ ಮುಂದುಡುವಿಕೇ ಮಾಡುತ್ತಾರೆ, ಯಾಕಂದ್ರೆ, ಅವರು ತಮ್ಮ ಬಗ್ಗೆ ಮತ್ತು, ಇತರರ ಬಗ್ಗೆ ಹೆಚ್ಚು ಕೇರ್ ಮಾಡುತ್ತಾರೆ,
ಇವರು ಆಗಾಗ್ಗೆ ತಮ್ಮ ಭಯ ಮತ್ತು ಫೆಲ್ ಆದ್ರೆ ಹೆಂಗೆ ಎಂಬ ಬಗ್ಗೆ ಯೋಚಿಸುತ್ತಾ ಇರುತ್ತಾರೆ,
ಕೆಲಸವನ್ನು ಮುಂದೂಡುವ ಜನರು ಅವರ ಕೆಲಸವನ್ನ ಭಯ ಪಡುತ್ತಾರೆ,
ಆಲಸ್ಯದ ಕಾರಣ ಏನೇ ಇರಲಿ, ಫಲಿತಾಂಶವು ಒಂದೇ ಆಗಿರುತ್ತದೆ,
ಆಗಾಗ್ಗೆ ಮುಂದೂಡುವವರು ,ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿರುತ್ತಾರೆ,
ಅಂಥ ಭಾವನೆಗಳು ಎಂದರೆ, ಅವಮಾನದ ನಿರಂತರ ಭಾವನೆಗಳು,
ಹೆಚ್ಚಿನ ಒತ್ತಡದ ಮಟ್ಟಗಳು, ಮತ್ತು ಹೆಚ್ಚಿನ ಒತ್ತಡಕ್ಕೆ ಸಂಬಂಧಿಸಿದ ದೈಹಿಕ ಕಾಯಿಲೆಗಳು.
ಆಲಸ್ಯವು ದೀರ್ಘಾವಧಿಯಲ್ಲಿ ನಮಗೆ ನೋವುಂಟು ಮಾಡುತ್ತದೆ,
ಆದ್ದರಿಂದ, ನಾವು ಆಲಸ್ಯದ ಚಕ್ರವನ್ನು ಹೇಗೆ ಮುರಿಯಬಹುದು?
ಹೇಗೆ ಆಲಸ್ಯವನ್ನು ಹೊಡೆದೋಡಿಸಬೇಕು ಎಂದರೆ, ನೀವು ಸರಿಯಾಗಿ ಟೈಂ ಟೇಬಲ್ ಹಾಕಿಕೊಳ್ಳಬೇಕು, ಮತ್ತು ಅದರಂತೆ ಸರಿಯಾಗಿ ಸ್ಟ್ರಿಕ್ಟ್ ಆಗಿ ನಡೆದುಕೊಳ್ಳಬೇಕು,
ಆದರೆ ಹಲವಾರು ಜನರು ತಾವು ಹಾಕಿಕೊಂಡಿರುವ ಟೈಂ ಟೇಬಲ್ ನ ಪ್ರಕಾರ ನಡೆಯುವುದಿಲ್ಲ, ಹೀಗಿದ್ದಾಗ
ಆವರು ವರ್ಕ್ ಮಾಡಲು ಮುಂದಾದಾಗ, ಏನಾದರೂ ಬ್ಯಾಡ್ ಏಮೋಶನ್ ಬರ್ತಾ ಇದ್ರೆ ಅವನ್ನು ಗುರುತಿಸಿ, ಸರಿಯಾದ ಪರಿಹಾರ ಕಂಡುಕೊಳ್ಳುವುದು ಮುಖ್ಯವಾಗುತ್ತದೆ , ಯಾಕೆ ಆಲಸ್ಯ ಬರುತ್ತಿದೆ, ಯಾಕೆ ಕೆಲಸ ಮಾಡಲು ಸಾದ್ಯ ಆಗುತ್ತಿಲ್ಲ, ಎಂದು ಕೆಲಸ ಯಾಕೆ ಇಷ್ಟವಾಗುತ್ತಿಲಿಲ್ಲ, ಎಂದು ಯೋಚಿಸಿ ಕೆಲಸವನ್ನು ಇಷ್ಟ ಪಟ್ಟು ಖುಷಿಯಿಂದ ಮಾಡಲು ಮುಂದಾಗಬೇಕು, ಯಾಕಂದ್ರೆ ನಮ್ಮ ಮನಸ್ಸು ನಾವು ಯಾವುದರಿಂದ ಖುಷಿ ಪಡುತ್ತೇವೆ, ಅದನ್ನು ನಾವು ಜಾಸ್ತಿ ಮಾಡಲು ಇಷ್ಟ ಪಡುತ್ತವೆ,