pain vs mind

ನೀವು  ಒಂದು ಸಣ್ಣ ಎಲೆಕ್ಟ್ರಿಕ್ ಶಾಕ್ ಅನ್ನು ಎಷ್ಟು ಹೊತ್ತು ಹಾಗೆ ಹಿಡಿದು ಕೊಳ್ಳ ಬಲ್ಲಿರಿ, ಬಹುಶಃ ನೀವು ಕೈಯನ್ನು ಹಿಂದಕ್ಕೆ ತೆಗೆದು ಕೊಳ್ಳುತ್ತಿರಾ, ಯಾಕಂದ್ರೆ ಮಿದುಳಿನ
ನೋವಿನ ಸಿಗ್ನಲ್ ಗಳು ನಿಮ್ಮ ಕಾರ್ಯವನ್ನು ಒಪ್ಪುವುದಿಲ್ಲ, 
ಮತ್ತೆ ಕೆಲವು ಜನರು ಹೆಚ್ಚು ಕಾಲ ಹಿಡಿದಿಟ್ಟು ಕೊಳ್ಳ ಬಲ್ಲರು, ಯಾಕಂದ್ರೆ ಅವರು ತಮ್ಮ ಮನಸ್ಸನ್ನು ಬೇರೆಡೆಗೆ ಕಲಿಸುವರು, ಹೀಗೆ ನೀವು ನೋವನ್ನು ಹೇಗೆ ನಿಭಾಯಿಸುತ್ತಿರಾ  ಎಂಬುದರ  ಮೇಲೆ ಡಿಪೆಂಡ್ ಆಗಿರುತ್ತದೆ, 
ಹೀಗೆ ಜನರಿಂದ ಜನರಿಗೆ ನೋವು ಉಂಟಾಗುವುದು ಡಿಫರೆಂಟ್ ಆಗಿರುತ್ತೆ, 
ನೋವಿನ ಪ್ರಚೋದನೆಯ ಅವರ ಮನ್ನಸಿನ ಮೇಲೆಯೂ ಅವಲಂಬಿತವಾಗಿರುತ್ತದೆ,
ಹೀಗೆ ಇದು ಯಾಕೆ ಮ್ಯಾಟರ್ ಆಗುತ್ತೆ, 
ಮೊದಲನೆಯದಾಗಿ ಪೈನ್ ಎಂದರೇನು, 
ನೋವು ಒಂದು ಅಹಿತಕರ ಸಂವೇದನಾ ಮತ್ತು ಭಾವನಾತ್ಮಕ ಅನುಭವ,
ನಿಜವಾದ ಅಥವಾ ಸಂಭಾವ್ಯ ಅಂಗಾಂಶ ಹಾನಿಗೆ ಸಂಬಂಧಿಸಿದೆ.
ಪೈನ್ ನಾವು ಅನುಭವಿಸುವ ಒಂದು ವಿಷಯವಾಗಿದೆ,

ಪೈನ್ ಒಂದು ಮಟ್ಟದ ತೀವ್ರತೆಯನ್ನು ಹೊಂದಿರುತ್ತದೆ, ಇದನ್ನು ಅಲೆಯುವುದಾದರೆ ಶೂನ್ಯದಿಂದ ಪೈನ್ ಉಂಟಾಗುವುದಿಲ್ಲ, ಆದ್ರೆ ಒಂದರಿಂದ ಹತ್ತರವರೆಗೆ ಪೈನ್ ಒಂದು ಕಲ್ಪನೆಯಾಗಿದೇ ,

ನೋವು ಕೂಡ ತನ್ನದೇ ಆದ ಗುಣವನ್ನು ಹೊಂದಿರುತ್ತದೆ ,
ತೀಕ್ಷ್ಣವಾದ, ಮಂದವಾದ, ಸುಡುವ ಅಥವಾ ನೋಯುತ್ತಿರುವಂತೆ, ನೀವು ಯಾವುದಾದರೂ ಪೈನ್ ಗೆ ಒಳಗಾದಾಗ,
ನಿಮ್ಮ ದೇಹದಲ್ಲಿ ನಿಖರವಾಗಿ ಯಾವುದು ನೋವನ್ನು ಕ್ರಿಯೇಟ್ ಮಾಡುತ್ತದೆ,
ನಮ್ಮ ಚರ್ಮ ಅಥವಾ ಅಂಗಾಂಶ ಹಾನಿಗೆ ಒಳಗಾದಾಗ, ಅಲ್ಲಿರುವ ಸ್ಪೆಸಿಯಲ್ ನರಗಳಾದ ನೊಸೆಸೆಪ್ಟರ್‌ಗಳು ಬೆನ್ನು ಮೂಳೆಯ ಮೂಲಕ ಮಿದುಳಿಗೆ ನೋವಿನ ಸಿಗ್ನಲ್ ಗಳನ್ನ ಕಳಿಸುತ್ತವೆ, ನಂತರ ಮುಂದಿನ ಕಾರ್ಯಗಳಾದ, ಸರಿಪಡಿಸುವುದು ಮತ್ತು ಇತರೆ ಕಾರ್ಯಗಳನ್ನು ಮಿದುಳಿನ ನ್ಯೂರಾನ್  ಗ್ಲಿಯಾ ಎಂಬ ಕೋಶಗಳಿಂದ ಆಗುತ್ತದೆ, ಇದು ಮಿದುಳಿನ ಕಂದು ಬಣ್ಣದ ಅಂಶದಲ್ಲಿ ಇರುತ್ತದೆ, ಹಾಗೇಯೇ ನಿಮ್ಮ ಮಿದುಳಿನ ಬಿಳಿ ಬಣ್ಣದ ಅಂಗಾಂಶದಲ್ಲೀ ಇರುವ ನರಗಳು  ಈ ಮಿದುಳಿನ ಸಿಗ್ನಲ್ ಗಳು ಫಾಸ್ಟ್ ಆಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬೆನ್ನು ಮೂಳೆಯಿಂದ ಮಿದುಳಿಗೆ ಚಲಿಸಲು ಸೂಪರ್ ಹೈವೇ ತರ ಕೆಲಸ ಮಾಡುತ್ತವೆ, ಹೀಗೆಯೇ 
ಹೀಗೆ ಚಲಿಸುವ ಈ ಸಿಗ್ನಲ್ ಗಳು, ಕೊನೆಗೆ ಮಿದುಳಿನ ಕಾರ್ಟೆಕ್ಸ್ ಅಲ್ಲಿ ಕೊನೆಗೊಳ್ಳುತ್ತವೆ, ಈ ಕಾರ್ಟೆಕ್ಸ್ ಈ ರೀತಿ ನೋವು ಆದಾಗ,  ಏನು ಮಾಡಬೇಕು ಎಂದು ನಿರ್ಧಾರ ತೆಗೆದು ಕೊಳ್ಳುವ ಒಂದು ಭಾಗವಾಗಿದೆ ,

 ಮೆದುಳಿನ ಕೋಶಗಳ ಮತ್ತೊಂದು ವ್ಯವಸ್ಥೆ ಎಂದರೆ, ಅದುವೇ 
 ಸಾಲೈಯನ್ಸ್ ನೆಟ್ವರ್ಕ್ ಎಂದು ಕರೆಯಲಾಗುತ್ತದೆ,
 ಯಾವುದಕ್ಕೆ ಗಮನ ಕೊಡಬೇಕೆಂದು ಇವು ನಿರ್ಧರಿಸುತ್ತದೆ.
 ನೋವು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು, ಆದ್ದರಿಂದ 
 ನೋವಿನ ಸಂಕೇತವು ತಕ್ಷಣವೇ ಸಲೈಯನ್ಸ್ ನೆಟ್ವರ್ಕ್ ಅನ್ನು ಸಕ್ರಿಯಗೊಳಿಸುತ್ತದೆ.
 ಈಗ, ನೀವು ಗಮನ ಹರಿಸುತ್ತಿದ್ದೀರಿ.
 ಮೆದುಳು ಕೂಡ ನೋವಿಗೆ ಸ್ಪಂದಿಸುತ್ತದೆ, ಉದಾಹರಣೆಗೆ 
ಬಿಸಿ ಒಲೆಯಿಂದ ನಿಮ್ಮ ಕೈಯನ್ನು ತೆಗೆದುಕೊಳ್ಳುವುದು ಇತರೆ ಸಂವೇಧನೆಗಳು, 

ಹಾಗೆಯೇ ಇದು  ಮಾಡ್ಯುಲೇಶನ್ ನೆಟ್‌ವರ್ಕ್‌ಗಳನ್ನು ಅಂದ್ರೆ ದೇಹವನ್ನು ಸರಿಪಡಿಸುವ ರಾಸಾಯನಿಕ ನೆಟ್ವರ್ಕ್ ಅನ್ನು ಸಹ ಸಕ್ರಿಯಗೋಳಿಸುತ್ತದೆ,
 ಇದು ಎಂಡಾರ್ಫಿನ್ ಮತ್ತು ಎನ್ಕೆಫಾಲಿನ್ಗಳನ್ನು ರಿಲೀಸ್ ಮಾಡುತ್ತವೆ,
 ನೀವು ನೋವಿನಿಂದ ಬಳಲುತ್ತಿರುವಾಗ, ಅಥವಾ ತೀವ್ರವಾದ ವ್ಯಾಯಾಮದ ಸಮಯದಲ್ಲಿ ಕೆಲವೊಂದು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ, 
 ಓಟಗಾರನ ಎತ್ತರವನ್ನು ರಚಿಸುವುದು, ಮತ್ತು ಇತರೆ ಕಾರ್ಯಗಳನ್ನು ಮಾಡುತ್ತವೆ, 
 ಈ ರಾಸಾಯನಿಕ ವ್ಯವಸ್ಥೆಗಳು ನೋವನ್ನು ನಿಯಂತ್ರಿಸಲು, ಮತ್ತು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
 ಈ ಎಲ್ಲಾ ನೆಟ್‌ವರ್ಕ್‌ಗಳು, ಮತ್ತು ಮಾರ್ಗಗಳು ಒಟ್ಟಿಗೆ ಕೆಲಸ ಮಾಡುತ್ತವೆ,
 ನಿಮ್ಮ ನೋವಿನ ಅನುಭವವನ್ನು ರಚಿಸಲು,
 ಮತ್ತಷ್ಟು ಅಂಗಾಂಶ ಹಾನಿಯನ್ನು ತಡೆಗಟ್ಟಲು,
 ಮತ್ತು ನೋವನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುತ್ತದೆ.
 ಈ ವ್ಯವಸ್ಥೆಯು ಎಲ್ಲರಿಗೂ ಸಮಾನವಾಗಿರುತ್ತದೆ,

ಆದರೆ ಈ ಮೆದುಳಿನ ಸರ್ಕ್ಯೂಟ್‌ಗಳ ಸೂಕ್ಷ್ಮತೆ ಮತ್ತು ಪರಿಣಾಮಕಾರಿತ್ವ,
 ನೀವು ಎಷ್ಟು ಅನುಭವಿಸುತ್ತೀರಿ ಮತ್ತು ನೋವನ್ನು ಹೇಗೆ ನಿಭಾಯಿಸುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ.
 ಇದರಿಂದಾಗಿ ಕೆಲವರಿಗೆ ಇತರರಿಗಿಂತ ಹೆಚ್ಚಿನ ನೋವು ಇರುತ್ತದೆ,
 ಮತ್ತು ಏಕೆ ಕೆಲವರು ದೀರ್ಘಕಾಲದ ನೋವನ್ನು ಅಭಿವೃದ್ಧಿಪಡಿಸುತ್ತಾರೆ,
 ಚಿಕಿತ್ಸೆಗೆ ಪ್ರತಿಕ್ರಿಯಿಸುವುದಿಲ್ಲ,
 ಇತರರು ಚೆನ್ನಾಗಿ ಪ್ರತಿಕ್ರಿಯಿಸುತ್ತಾರೆ.

ಹಾಗೆಯೇ ಕೆಲವು ಜನರು ದೊಡ್ಡ ಆಟಗಳಾದ ಮೇಲೆ ಹಾರಾಡುವ ಆಟವನ್ನು ಯಾಕೆ ಇಷ್ಟ ಪಡುತ್ತಾರೆ, ಮತ್ತು ಇತರರು ಯಾಕೆ ಅದನ್ನು  ಭಯದಿಂದ ನೋಡುತ್ತಾರೆ, ಮತ್ತು ಅದರಲ್ಲಿ ಆಟ ಆಡಲು ಭಯ ಪಡುತ್ತಾರೆ, ವ್ಯತ್ಯಾಸವಿದೆ, ಎಂಬುದು ಏಕೆ ಮುಖ್ಯವಾಗುತ್ತದೆ, ಯಾಕಂದ್ರೆ
 ನಮ್ಮ ನೋವು ಮೆದುಳಿನ ಸರ್ಕ್ಯೂಟ್ಗಳಲ್ಲಿ ಇದೆ ,

ನೋವಿಗೆ ಹಲವಾರು ಚಿಕಿತ್ಸೆಗಳು ಇವೆ ,
ಸಲ್ಪ ನೋವಿಗೆ ಡಾಕ್ಟರ್ ಅವಶ್ಯಕತೆ ಇಲ್ಲದೆ ಮಾತ್ರೆಗಳು ಸಿಗುತ್ತವೆ, ಮತ್ತು ಇತರೆ ಮಾತ್ರೆಗಳು ನೋವಿನ ನರಗಳ ಸಿಗ್ನಲ್ ಮಿದುಳಿಗೆ ಹೋಗದಂತೆ ಪೈನ್ ಕಿಲ್ಲರ್ ಮಾತ್ರೆ ವರ್ಕ್ ಮಾಡುತ್ತವೆ, ಇತರೆ ಮಾತ್ರೆ ಮತ್ತು ಅರವಳಿಕೆ ಗಳು ನೋವು ನಿಭಾಯಿಸುವ ಮೈಂಡ್ ನ ಕಾರ್ಯದ ಚಟುವಟಿಕೆಯನ್ನು ಕಡಿಮೆ ಮಾಡುವ ಮೂಲಕ ಕೆಲಸ ಮಾಡುತ್ತವೆ, ಹಾಗೂ ದೇಹವನ್ನು ಸರಿಪಡಿಸುವ ಎಂಡಾರ್ಫಿನ್‌ಗಳನ್ನು, ಹಾಗೂ ಅದರ  ರಾಸಾಯನಿಕ  ಗಳನ್ನೂ ಹೆಚ್ಚಿಸಿ ಸರಿಪಡಿಸುವ ಕಾರ್ಯ ಮಾಡುತ್ತವೆ, 

ಹಾಗೆಯೇ ಕೆಲವು ಜನರು ಯೋಗ ಧ್ಯಾನ ಮುಂತಾದ ಚಟುವಟಿಕೆ ಗಳ ಮೂಲಕ ನೋವನ್ನು ಕಡಿಮೆ ಮಾಡಿಕೊಳ್ಳುತ್ತಾರೆ, ಅಥವಾ ಕೆಲವು ಮನಸ್ಸಿನ ನಿಯಂತ್ರಣದ ತಂತ್ರದ ಮೂಲಕ ಕಡಿಮೆ ಗೋಳಿಸುತ್ತಾರೆ, 

ಕೆಲವು ಜನರು ದೀರ್ಘಕಾಲದ ಪೈನ್ ಅನ್ನು ಹೊಂದಿರುತ್ತಾರೆ, ಇವರ ಪೈನ್ ಒಂದು ತಿಂಗಳಾದರೂ ವಾಸಿಯಾಗುವುದಿಲ್ಲ, ಮತ್ತು ಯಾವುದೇ ಚಿಕಿತ್ಸೆ ವರ್ಕ್ ಮಾಡುವುದಿಲ್ಲ, ಸೋ ವಿಜ್ಞಾನಿಗಳು ಹಲವಾರು ಜನರ ಮೇಲೆ ಚಿಕಿತ್ಸೆಯ ಟೆಸ್ಟ್ ಗಳನ್ನ ಮಾಡುತ್ತಾರೆ,
ಯಾವುದು ಪೇಷಂಟ್ ಗಳಿಗೆ ಸಹಾಯ ಮಾಡುತ್ತದೆ ಎಂದು, ಆದ್ರೆ ಈ ಟೆಸ್ಟ್ ಗಳು  ಔಟ್ ಆದವು ಅಂದ್ರೆ ಸರಿಯಾಗಿ ಗೊತ್ತಾಗಲಿಲ್ಲ, 

ಹೀಗಾಗಿ ಇತ್ತೀಚಿನ ಚಿಕಿತ್ಸೆಗಳು ನೋವಿನ ಸಿಗ್ನಲ್ ಗಳು ಮಿದುಳಿಗೆ ಹೋಗದಂತೆ ತಡೆಯುವುದು ಮಾಡುತ್ತವೆ, ಅಥವಾ ದೇಹವನ್ನು ಸರಿಪಡಿಸುವ ವ್ಯವಸ್ತೆಯನ್ನು  ಹೆಚ್ಚು ಮಾಡುವುದಾಗಿದೆ,
ಹೀಗೆ ಪ್ರತಿಯೊಬ್ಬ ರೋಗಿಯನ್ನು ಸಹ ಒಬ್ಬೊಬ್ಬರಿಗೆ ದೊಡ್ಡ ಸ್ಕ್ಯಾನ್ ನ ಮೂಲಕ ಸ್ಕ್ಯಾನ್ ಮಾಡುವುದರ ಜೊತೆಗೆ, ಮಿದುಳಿನ ಮ್ಯಾಪ್ ತಯಾರಿಸುವುದು, ಕೂಡ ಇಂಪಾರ್ಟೆಂಟ್ ಆಗಿದೆ, ಬ್ರೈನ್ ಯಾವ ರೀತಿ ನೋವಿಗೆ ಪ್ರತಿಪಂದಿಸುತ್ತದೆ, ಎಂದು ಮಿದುಳಿನ ಮ್ಯಾಪ್ ತಯಾರಿಸುವುದರಿಂದ, ಬೆಸ್ಟ್ ಟ್ರೈಟ್ ಮೆಂಟ್ಗೆ ಸಹಾಯ ಆಗುತ್ತದೆ.














ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!