ಸಕ್ಸಸ್ ಸೆಲ್ ಸೆಲೆಬ್ರಿಟಿಗಳ ಮೈಂಡ್ ಯಾವ ರೀತಿ ವರ್ಕ್ ಮಾಡುತ್ತದೆ

ಹಾಯ್ ಫ್ರೆಂಡ್ಸ್ ಈ ವಿಡಿಯೋದಲ್ಲಿ, ತುಂಬಾ ಫೇಮಸ್ ಆದ ಸ್ಟೆಜ್ ಗಳಲ್ಲಿ ಜನರು ಹೇಗೆ ವಿಶಿಷ್ಟವಾದ ನೃತ್ಯ ಮಾಡುತ್ತಾರೆ, ಮತ್ತು ಅವರ ಮೈಂಡ್ ಇದಕ್ಕೆ ಹೇಗೆ ತಯಾರಾಗುತ್ತದೆ ಎಂದು ವಿವರಿಸಲಾಗಿದೆ,

ಯಾವುದೇ ಆಟವಾದರು ನೃತ್ಯ ಕಲೆಯಾದರು ಸಹ, ಅಭ್ಯಾಸ ಇಲ್ಲದೆ ಬರುವುದಿಲ್ಲ, ಆಗದರೆ ನಮ್ಮ ಮೈಂಡ್ ಇವುಗಳನ್ನು ಹೇಗೆ ಕಲಿಯುತ್ತದೆ, ಮಿದುಳು ಎರೆಡು ರೀತಿಯ ನರ ಅಂಗಾಂಶವನ್ನು ಹೊಂದಿದೆ, ಒಂದು ಬೂದು ಬಣ್ಣದಿಂದ ಕೂಡಿದ ಅಂಗಾಂಶ, ಮತ್ತು ಇನ್ನೊಂದು ಬಿಳಿಯ ಬಣ್ಣದಿಂದ ಕೂಡಿದ ನರ ಅಂಗಾಂಶ, 
ಬೂದು ಬಣ್ಣದ ಅಂಗಾಂಶ ಮೆದುಳಿನಲ್ಲಿ ಮಾಹಿತಿಯನ್ನು ಪ್ರಕ್ರಿಯೆಗೊಳಿಸುತ್ತದೆ,
 ನರ ಕೋಶಗಳಿಗೆ ಸಂಕೇತಗಳು, ಮತ್ತು ಸಂವೇದನಾ ಪ್ರಚೋದನೆಗಳನ್ನು ನಿರ್ದೇಶಿಸುವುದನ್ನು ಮಾಡುತ್ತದೆ,
ಆದರೆ ಬಿಳಿ ಬಣ್ಣದ ಅಂಗಾಂಶ ಹೆಚ್ಚಾಗಿ ಕೊಬ್ಬಿನ ಅಂಗಾಂಶ ಮತ್ತು ನರ ನಾರುಗಳಿಂದ ಮಾಡಲ್ಪಟ್ಟಿದೆ.
ನಮ್ಮ ದೇಹವು ಚಲಿಸಬೇಕೆಂದರೆ ಬೂದು ಬಣ್ಣದ ಅಂಗಾಂಶದ ಆದೇಶ ತುಂಬಾ ಮುಖ್ಯವಾಗಿರುತ್ತದೆ, ಬೂದು ಬಣ್ಣದ ಅಂಗಾಂಶ ಸಿಗ್ನಲ್ ಅನ್ನು ಆಕ್ಸಾನ್ ಎಂಬ ಬಿಳಿ ಬಣ್ಣದ ನರಗಳ ಚೈನ್ ಮೂಲಕ ಬೆನ್ನುಮೂಳೆಯ ಮೂಲಕ ನರಗಳಿಂದ ಸ್ನಾಯುಗಳಿಗೆ ಕಳಿಸುತ್ತದೆ, ಆಗ ನಮ್ಮ ಸ್ನಾಯುಗಳು ಕೆಲಸ ಮಾಡುತ್ತವೆ, ಹಾಗಾದರೆ ಅಭ್ಯಾಸ ಅಥವಾ ಪುನರಾವರ್ತನೆಯು ನಮ್ಮ ಮೆದುಳಿನ ಆಂತರಿಕ ಕಾರ್ಯಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ನಾವು ಯಾವುದಾದರೂ ಕೆಲಸ ಅಥವ ವಾದ್ಯವನ್ನು ಅಭ್ಯಾಸ ಅಥವಾ ಪ್ರಾಕ್ಟೀಸ್ ಮಾಡಿದಂತೆ, ಬಿಳಿ ಬಣ್ಣದ ಭಾಗದಲ್ಲಿ ಇರುವ ಅಕ್ಸಾನ್ ಎಂಬ ನರಗಳಿಗೆ ಸುತ್ತುವರೆದಿರುವ ಮೈಲಿನ್ ಎಂಬ ಒಂದು ರೀತಿಯ ಕೊಬ್ಬಿನ ಅಂಗಾಂಶ ಚೇಂಜ್ ಆಗುತ್ತದೆ, ಇದು ಒಂದು ರೀತಿಯಲ್ಲಿ ವಿದ್ಯುತ್ ವೈರ್ ಗಳ ಮೇಲೆ ಇರುವ ಇನ್ಸುಲೆಷನ್ ರೀತಿಯ ತರ ಕೆಲಸ ಮಾಡುತ್ತದೆ , ಅಂದ್ರೆ ಮಿದುಳಿನಿಂದ ದೇಹಕ್ಕೆ ಸಾಗುವ ಸಿಗ್ನಲ್ ಗಳ ಎನರ್ಜಿ ಲಾಸ್ ಆಗುವುದನ್ನು ತಡೆಯುವ ಮೂಲಕ ಮಿದುಳಿನ ಸಿಗ್ನಲ್ ಗಳನ್ನ ದೇಹಕ್ಕೆ ಸ್ಪೀಡ್ ಆಗಿ ತಲುಪಿಸುವಲ್ಲಿ ಕೆಲಸ ಮಾಡುತ್ತದೆ, 

ಇತ್ತೀಚಿನ ಇಲಿಗಳ ಮೇಲೆ ಸಂಶೋಧನೆ ಮಾಡಿದ ಪ್ರಕಾರ, ಅವುಗಳಿಗೆ ಹೆಚ್ಚು ಪ್ರಾಕ್ಟೀಸ್ ಮಾಡಿಸಿದಂತೆ, ಈ ಅಕ್ಸಾನ್ ನ ಮೇಲೆ ಇರುವ ಮೈಲಿನ್ ಎಂಬ ಅಂಗಾಂಶ ಬದಲಾಗುವುದರ ಜೊತೆಗೆ ನರಗಳ ಉದ್ದಕ್ಕೂ ಸುತ್ತುವರೆದು, ಮಿದುಳಿನ ಸಿಗ್ನಲ್ ದೇಹದ ಸ್ನಾಯುಗಳಿಗೆ ಸ್ಪೀಡ್ ಆಗಿ ಸಾಗಲು ಸೂಪರ್ ಐ ವೆ ರೋಡ್ ಅನ್ನು ತಯಾರಿಸುತ್ತದೆ ,

ಕ್ರೀಡಾಪಟುಗಳಿಗೆ ಅವರ ಬಗ್ಗೆ ಕೇಳಿದಾಗ, ಅವರು ನಮ್ಮ ಸ್ನಾಯುಗಳ ಮೆಮೊರಿ ಪವರ್ ನಿಂದಾ ನಾನು ಯಶಸ್ವಿ ಆಗಿದ್ದೇನೆ ಎಂದು ಹೇಳುತ್ತಾರೆ, ಆದ್ರೆ ಸ್ನಾಯುಗಳಲ್ಲಿ ಯಾವುದೇ ಮೆಮೊರಿ ಇರುವುದಿಲ್ಲ, ಆದ್ರೆ ಅವರ ಪ್ರಾಕ್ಟೀಸ್ ಮಿದುಳಿನ ಸಿಗ್ನಲ್ ಗಳ ಮೇಲೆ ಮೈಲಿನ್ ಅಂಗಾಂಶ ಪೊರೆಯನ್ನು ರಚಿಸುವ ಮೂಲಕ ಎನರ್ಜಿ ಲಾಸ್ ಆಗುವುದನ್ನು ತಡೆಯುತ್ತವೆ,  
ಹೀಗೆ ನಾವು ಎಷ್ಟು ಸಮಯ ಅಭ್ಯಾಸ ಮಾಡಿದೀವಿ ಅನ್ನೋದು ಇಂಪಾರ್ಟೆಂಟ್ ಆಗೋದಿಲ್ಲ, ಆದ್ರೆ ನಾವು ಎಷ್ಟು ಫೋಕಸ್ ಆಗಿ ಮತ್ತು ಪರಿಣಾಮಕಾರಿಯಾಗಿ ಅಭ್ಯಾಸ ಮಾಡಿದ್ದೇವೆ ಅನ್ನೋದು ಇಂಪಾರ್ಟೆಂಟ್ ಆಗುತ್ತೆ, 
ಅಗದ್ರೆ ನಾವು ಏಕಾಗ್ರತೆಯಿಂದ ಪರಿಣಾಮಕಾರಿ ಅಭ್ಯಾಸ ವನ್ನ ಹೇಗೆ ಹೊಂದುವುದು, 
ಹೇಗೆಂದರೆ ಕೈಯಲ್ಲಿ ಇರುವ ಕೆಲಸದ ಮೇಲೆ ಗಮನ ಕೊಡಿ, ನಿಮ್ಮ ಹತ್ತಿರ ಇರುವ ಮೊಬೈಲ್ ಲ್ಯಾಪ್ ಟಾಪ್ ಇತರೆ ವಸ್ತುಗಳು ಮತ್ತು ಇತರೆ ಆಲೋಚನೆಗಳನ್ನು ದೂರ ಸರಿಸಿ ,

ವಿಜ್ಞಾನಿಗಳು 260 ವಿದ್ಯಾರ್ಥಿಗಳ ಮೇಲೆ ಗಮನ ಕೊಟ್ಟು ಅಧ್ಯಯನ ಮಾಡುವಾಗ, ಅವರು ಕೊಟ್ಟಿರುವ ಟಾಸ್ಕ್ ಮಲೇ ಕೇವಲ 6 ನಿಮಿಷ ಮಾತ್ರ ಆ ಟಾಸ್ಕ್ ಮೇಲೆ ಗಮನ ಕೊಡಲು ಸಾಧ್ಯ ವಾಯಿತು, ಯಾಕಂದ್ರೆ ಅವರ ಹತ್ತಿರ ಇದ್ದ ಲ್ಯಾಪ್ ಟಾಪ್,ಮೊಬೈಲ್ ಇತರೆ ವಸ್ತುಗಳು ಅವರ ಗಮನವನ್ನು ಡಿಸ್ಟರ್ಬ್ ಮಾಡಿದವು ,

ಹಲವಾರು ಸಕ್ಸಸ್ ಆದ ಕ್ರೀಡಾಪಟುಗಳು ಮತ್ತು ಸಂಗೀತಗಾರರು, ಡ್ಯಾನ್ಸ್ ಕಲಾವಿದರು ವಾರದಲ್ಲಿ 50 ರಿಂದ 60 ತಾಸುಗಳನ್ನು 
ತಮ್ಮ ಅಭ್ಯಾಸಕ್ಕೆ ಉಪಯೋಗಿಸುತ್ತಾರೆ, 

ಹಲವಾರು ರಿಸರ್ಚ್ ಪ್ರಕಾರ, ಒಂದು ಬಾರಿ ಅಭ್ಯಾಸ ಮಾಡಿದರೆ ಸಾಕು, ಕೇವಲ ಕಲ್ಪನೆಯ ಮೂಲಕವೇ ಅದನ್ನು ಎತ್ತರ ಮಟ್ಟಕ್ಕೆ ತೆಗೆದು ಕೊಂಡು ಹೋಗಬಹುದು, 

ಒಮ್ಮೆ ವಿಜ್ಞಾನಿಗಳು ಬಾಸ್ಕೆಟ್ ಬಾಲ್ ನ ಮೇಲೆ ಎರೆಡು ತಂಡಗಳ ಮೇಲೆ ಸಂಶೋಧನೆ ಮಾಡುತ್ತಾರೆ, ಎ ತಂಡಕ್ಕೆ ಕೈಯಿಂದ ಅಂದ್ರೆ ದೇಹದ ಮೂಲಕ ಪ್ರಾಕ್ಟಿಕಲ್ ಆಗಿ ಅಭ್ಯಾಸ ಮಾಡಿಸುತ್ತಾರೆ, ಮತ್ತು ಬಿ ತಂಡಕ್ಕೆ ಮಾನಸಿಕವಾಗಿ ಅಂದ್ರೆ ನೋಡುವುದರ ಮೂಲಕ ಕಲಿಯುವುದು, ಹೀಗೆ ವಾರದ ಅಂತ್ಯದಲ್ಲಿ, ಈ ಎರೆಡು ತಂಡಗಳ ಮೇಲೆ ಸ್ಪರ್ದೆ ಏರ್ಪಡಿಸಿದಾಗ ಎರೆಡು ತಂಡಗಳು ಸಮನಾಗಿ ಆಟ ಆಡಿದರು ,

ಅಂದ್ರೆ ಬಹಳ ಸಮಯದ ಅಬ್ಯಾಸಕ್ಕಿಂತ, ಎಫೆಕ್ಟ್ ಆದ ಮತ್ತು ಏಕಾಗ್ರತೆಯ ಅಭ್ಯಾಸ ತುಂಬಾ ಮುಕ್ಯವಾಗುತ್ತದೆ .







ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!