ಮೈಂಡ್ ನ ಯೋಚನೆಯ ಮೂಲಕ ಯಾವ ರೀತಿ ವಸ್ತುಗಳನ್ನು ಚಲಿಸಬಹುದು
ಆದ್ರೆ ಇದಕ್ಕೂ ಮೀರಿದ ಬ್ರೈನ್ ಬಗ್ಗೆ ನಮಗಿನ್ನೂ ಸಾಕಷ್ಟು ವಿಚಾರಗಳು ತಿಳಿಯುತ್ತಿಲ್ಲ, ವಿಜ್ಞಾನಿಗಳು ಮೈಂಡ್ ನ ಬಗ್ಗೆ ತಿಳಿಯಲು ಸುಮಾರು ವರ್ಷಗಳಿಂದ ಕಂಪ್ಯೂಟರ್ ಸ್ಕ್ಯಾನಿಂಗ್ ಮತ್ತು ಹಲವಾರು ವಿವಿಧ ರೀತಿಯ ಸ್ಕ್ಯಾನ್ ಮೂಲಕ ಸಂಶೋಧನೆ ಮಾಡುತ್ತಿದ್ದಾರೆ ,
ಆದ್ರೆ ಇವೆಲ್ಲ ಹೊರಗಿನಿಂದ ಮಾಡುವ ಸ್ಕ್ಯಾನ್ ಗಳಾಗಿವೆ,
ನಾವು ಮಾನವರ ಮಿದುಳಿನ ಒಳಗಡೆ ನೋಡುವಂತಾದರೆ ಹೇಗಿರುತ್ತದೆ, ಅವರ ಯೋಚನೆಗಳು ಮತ್ತು ಇತರೆ ಅವರ ಒಳಗಿನ ಮೈಂಡ್ ವರ್ಕ್ ಅನ್ನು ವೀಕ್ಷಿಸಿದರೆ ಹೇಗಿರುತ್ತದೆ,
ಬ್ರೈನ್ ಯಾವುದೋ ಕಾರಣದಿಂದ, ರೇಡಿಯೋ ಸರ್ಜರಿ ಮೂಲಕ ಗುಣವಾಗಿ ಹೊರ ಬಂದಾಗ ,
ಲೈಕ್ epilepsy ಎಂಬ ರೋಗಗಳಿಂದ ಹೊರಬಂದಾಗ, ಗುಣಮುಖವಾದ ಮಿದುಳಿನ ಭಾಗ, ಒಮ್ಮೊಮ್ಮೆ, ಯಾವುದೇ ಆದೇಶ ಇಲ್ಲದೆ ತನ್ನಿಂತಾನೇ ವರ್ತಿಸಲು ಶುರು ಮಾಡುತ್ತದೆ ,
ಆದ್ರೆ ಈ ರೀತಿ ಆಗ ಬೇಕಾದರೆ ಮೊದಲೇ ಇದರ ಬಗ್ಗೆ ತಿಳಿಯಲು ಮಿದುಳಿನ ಒಳಗೆ ಯಾವುದೇ ದಾರಿಯಿಲ್ಲ ,
ಹೀಗಾಗಿ ಅವನು ಕೆಲವು ಭಾರಿ ತನ್ನ ಕಂಟ್ರೋಲ್ ಅನ್ನು ಕಳೆದು ಕೊಳ್ಳುತ್ತಾನೆ,
ಕೆಲವೊಂದು ಮಾತ್ರೆಗಳು ಇದನ್ನು ಸರಿಪಡಿಸಲು ಕೆಲಸ ಮಾಡುತ್ತವೆ, ಆದ್ರೆ ಎಲ್ಲಾ ವ್ಯಕ್ತಿಗಳಿಗೂ ಈ ಮಾತ್ರೆ ಗಳು ವರ್ಕ್ ಮಾಡುವುದಿಲ್ಲ, ಸೋ ಹೀಗಾಗಿ ಕಂಟ್ರೋಲ್ ತಪ್ಪಿ ಕೆಲಸ ಮಾಡುವ ಮಿದುಳಿನ ಭಾಗವನ್ನು ಹೊರತೆಗೆಯಬೇಕಾಗುತ್ತದೆ , ಆದ್ರೆ ಡಾಕ್ಟರ್ಸ್ ಗೆ ಇದು ಒಂದು ಚಾಲೆಂಜ್ ಆಗುತ್ತದೆ, ಯಾಕಂದ್ರೆ ಮಿದುಳಿನ ಯಾವ ಭಾಗ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಅದನ್ನು ಗುರುತಿಸುವುದು ಹೇಗೆ, ಎಂಬುದರ ಬಗ್ಗೆ ಗೊತ್ತಾಗುವುದಿಲ್ಲ, ಸೋ ಹೀಗಾಗಿ ಅವ್ರು ಇಂತಹ ಪೇಷಂಟ್ ಅನ್ನು ಕರೆದುಕೊಂಡು ಬಂದು, ಮೈಂಡ್ ಗೆ ಕಂಪ್ಯೂಟರ್ ಅನ್ನು ಕನೆಕ್ಟ್ ಮಾಡುತ್ತಾರೆ, ಹೀಗೆ ರೋಗಿಯು ಕೆಲವು ವಾರಗಳ ಕಾಲ ಅವರ ಬಳಿಯೇ ಇರಬೇಕಾಗುತ್ತದೆ, ಯಾಕಂದ್ರೆ ಅವನು ಮತ್ತೆ ಯಾವಾಗ ತನ್ನ ಕಂಟ್ರೋಲ್ ಅನ್ನು ಕಳೆದುಕೊಳ್ಳುತ್ತಾನೆ ಎಂದು ಗೊತ್ತಾಗುವುದಿಲ್ಲ, ಹೀಗಾಗಿ ಮತ್ತೆ ಕಂಟ್ರೋಲ್ ಕಳೆದುಕೊಳ್ಳುವುದು ಎಲ್ಲಿಂದ ಆಗುತ್ತದೆ, ಅವನಿಂದನ, ಅಥವಾ ಅವನ ಮಿದುಳಿನಿಂದಲ, ಎಂಬ ವಿಷಯದ ಬಗ್ಗೆ ನಿಖರತೆ ಕಂಡು ಕೊಳ್ಳಲು ಈ ರೀತಿ ಮಾಡುತ್ತಾರೆ,ಅವನು ಒಂದು ಬಾರಿ ತನ್ನ ಕಂಟ್ರೋಲ್ ಅನ್ನು ಕಳೆದುಕೊಳ್ಳುತ್ತಾನೆ, ಅದು ಕಂಪ್ಯೂಟರ್ ನಲ್ಲಿ ರೆಕಾರ್ಡ್ ಆಗುತ್ತದೆ, ಹೀಗೆ ಡಾಕ್ಟರ್ಸ್ಗೆ, ಮಿದುಳಿನ ಯಾವ ಭಾಗ ವಿಫಲಗೊಂಡಿದೆ ಎಂಬುದು ಗೊತ್ತಾಗುತ್ತದೆ, ಹೀಗೆ ಮಿದುಳಿಗೆ ಕನೆಕ್ಟ್ ಆಗಿರುವ ಎಲೆಕ್ಟ್ರೋಡ್, ಮಿದುಳಿನ ಆಂತರಿಕ ಕಾರ್ಯದ ಬಗ್ಗೆ ತಿಳಿಸುತ್ತದೆ
ಯಾವುದೇ ವ್ಯಕ್ತಿಯು ಒಂದು ಚಿತ್ರವನ್ನು ಪದೇ ಪದೇ ನೋಡುತ್ತಿರುವಾಗ, ಅವನ ಮಿದುಳಿನ ಸೆಲ್ ಗಳಲ್ಲಿ, ಬೇರೆ ಬೇರೆ ರೀತಿಯ ರಿಯಾಕ್ಷನ್ ನಡೆಯುತ್ತವೆ, ಹೀಗೆ ಅವನು ನೆಕ್ಸ್ಟ್ ಟೈಮ್ ಯಾವಾಗ ಆ ಚಿತ್ರವನ್ನು ನೆನಪಿಸಿಕೊಳ್ಳುತ್ತಾನೇಯೋ, ಆಗ ಅವನ ಮಿದುಳಿಗೆ ಕನೆಕ್ಟ್ ಆಗಿರುವ ಎಲೆಕ್ಟ್ರೋಡ್ ನಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತವೆ, ಇದರ ಉಪಯೋಗವನ್ನು ವಿಜ್ಞಾನಿಗಳು ತುಂಬಾ ಎಫೆಕ್ಟಿವ್ ಆಗಿ ಉಪಯೋಗಿಸಿಕೊಳ್ಳುತ್ತಾರೆ, ಹೇಗೆಂದರೆ ಒಂದು ಸ್ಕ್ರೀನ್ ನ ಮೇಲೆ ಇರುವ ಕರ್ಸರ್ ಪಾಯಿಂಟ್ ಅನ್ನು ತಮ್ಮ ಯೋಚನೆಗಳ ಮೂಲಕ ಎಡಕ್ಕೆ ಅಥವಾ ಬಲಕ್ಕೆ ಚಲಿಸುತ್ತಾರೆ, ಯಾಕಂದ್ರೆ ಮಿದುಳಿಗೆ ಎಲೆಕ್ಟರೋಡ್ ಅನ್ನು ಕನೆಕ್ಟ್ ಮಾಡಿರುತ್ತಾರೆ, ಹೀಗೆ ಇದೆ ತತ್ವವನ್ನು, ಕೈ ಇಲ್ಲದ ಇರುವ ಅಥವಾ ಕೈಯನ್ನು ಚಲಿಸಲು ಆಗದ ಪೇಷಂಟ್ ಗಳಿಗೆ ಉಪಯೋಗಿಸುತ್ತಾರೆ, ಹೇಗೆಂದರೆ ಅವರ ಮೈಂಡ್ ಮತ್ತು ಕೃತಕವಾಗಿ ತಯಾರಿಸಿದ ಅಂಗಕ್ಕೆ ಮಿದುಳನ್ನು ಎಲೆಕ್ಟ್ರೋಡ್ ನ ಮೂಲಕ ಕನೆಕ್ಟ್ ಮಾಡುತ್ತಾರೆ, ಹೀಗೆ ಅವನ ಯೋಚನೆಯ ಮೂಲಕ ತನ್ನ ಕೃತಕ ಕೈ ಚಲಿಸುತ್ತದೆ .
ಹೀಗೆ ನಮ್ಮ ಮೈಂಡ್ ಒಂದು ಸೂಪರ್ ಆದ ಸಾಧನವಾಗಿದೆ, ಇದು ಭವಿಷ್ಯದ ಬಗ್ಗೆ ಪ್ರೆಡಿಕ್ಷನ್ ಕೊಡುತ್ತದೆ, ಮತ್ತು ಹಲವಾರು ಕೆಲಸಗಳನ್ನು ಮಾಡುತ್ತದೆ, ಇದು ಒಂದು ಸೂಪರ್ ಆದ ಅಂಗಾಂಶ ಆಗಿದೆ