ಮೈಂಡ್ ಆಲ್ಲಿ ಹಿಪ್ಪೊಕ್ಯಾಂಪಸ್ ನ ಕಾರ್ಯ ವೇನು

ಸಾವಿರದ ಓಂಬೈನುರ ಐವತ್ಮೂರ ರಲ್ಲಿ 
ವಿಲಿಯಂ ಸ್ಕೋವಿಲ್ಲೆ ಎಂಬವರು ಸತ್ತ  ಮಾನವನ ಮಿದುಳಿನ ತಲೆಬುರುಡೆ ಅನ್ನು ಕೊರೆಯಲು ಪ್ರಾರಂಭಿಸುತ್ತಾರೆ  ನಂತರ  ಒಳಗಿನ ನರಗಳನ್ನು ಮತ್ತು ಚರ್ಮವನ್ನು  ಒಂದು ಲೋಹದ ಕೊಳವೆಯ ಮೂಲಕ ಅದ್ರಲ್ಲಿ ಎಳೆದು ಹಾಕುತ್ತಾರೆ ವಿಲಿಯಂ ಸ್ಕೋವಿಲ್ಲೆ ಅವರು ಅಂದಿನ ಫೇಮಸ್ ಮಿದುಳಿನ ತಜ್ಞ ಆಗಿದ್ದ ಮತ್ತು   ಪೇಷಂಟ್ ಕೂಡ ಅಂದಿನ ಫೇಮಸ್ ವ್ಯಕ್ತಿ ಆಗಿದ್ದ ಅವನ ಹೆಸರು 
ಹೆನ್ರಿ ಮೊಲೈಸನ್ ಶಾರ್ಟ್ ಆಗಿ ಏಚ್ ಎಂ ಅಂತ ಕರೆಯುತ್ತಾರೆ
ಈ  ಸಂಶೋಧನೆ ನಮ್ಮ ಬ್ರೈನ್ ಹೇಗೆ ವರ್ಕ್ ಮಾಡುತ್ತೆ ಎಂಬುದರ ಒಳನೋಟವನ್ನು ತಿಳಿಸುತ್ತದೆ 
ಈ ಏಚ್ ಎಂ ನ ಬ್ರೈನ್  ಒಂದು ಆಕ್ಸಿಡೆಂಟ್ ಅಲ್ಲಿ ಡ್ಯಾಮೇಜ್ ಆಗುತ್ತೆ ನಂತರ ತನ್ನ ದೇಹದ ಮೇಲಿನ ಕಂಟ್ರೋಲ್ ತಪ್ಪುತ್ತಾ ಬರುತ್ತದೆ ಕೆಲವೊಂದು ವರ್ಷಗಳ ನಂತರ ಶಾಲೆಗೆ ಹೋಗುವುದನ್ನು ಬಿಡುತ್ತಾನೆ ನಂತರ ಈ ಏಚ್ ಎಂ  ಪೇಷಂಟ್ ಫೇಮಸ್ ಮಿದುಳು ತಜ್ಞಾರಾಗಿದ್ದ ಡಾ. ಸ್ಕೋವಿಲ್ಲೆ, ಹತ್ರ ಬರ್ತಾರೆ ರಿಸ್ಕ್ ಸರ್ಜರಿಗಳ ಬಗ್ಗೆ ಅನುಭವ ಹೊಂದಿದ್ದ ಡೇರ್ಡೆವಿಲ್ ಅವರು ದಶಕಗಳಿಂದಲು ಮೆಂಟಲ್ ಪೇಷಂಟ್ ಗಳನ್ನು ಮಿದುಳಿನ ಸಣ್ಣ ಸರ್ಜರಿ ಮೂಲಕ ಮೆಂಟಲ್ ಪೇಷಂಟ್ ಗಳನ್ನ ಸರಿ ಮಾಡುತಿದ್ದರು ಅವರು ಮಿದುಳಿನ ನರಗಳನ್ನು ಸರಿದೂಗಿಸುವ ಮೂಲಕ ಸರಿ ಮಾಡುತಿದ್ದರು ಹೀಗಾಗಿ ಆಕ್ಸಿಡೆಂಟ್ ಅಲ್ಲಿ ಮಿದುಳಿನ ವ್ಯವಸ್ಥೆ ಯನ್ನು ಕಳೆದುಕೊಂಡು ಬಂದಿದ್ದ ಪೇಷಂಟ್ ನ ಮೆದುಳಿನ ಹಿಪ್ಪೋಕ್ಯಾಂಪಸ್ ನ ಭಾಗವನ್ನು ತೆಗೆಯಲು ಡಿಸೈಡ್ ಮಾಡಿ ಅದನ್ನು ತೆಗೆದು ಹಾಕಿದರು ಇದರ 
ಪಲಿತಾಂಶವಾಗಿ ಅವನ ವರ್ತನೆಯು ಸರಿದುಗಿತು ಮತ್ತು ಮತ್ತು ಐ ಕ್ವಿ ಲೆವೆಲ್ ಕೂಡ ಹೆಚ್ಚಿತು ಆದ್ರೆ ಒಂದು ಒಂದು ಪ್ರಾಬ್ಲಂ ಎದುರಾಯಿತು ಅದೇನೆಂದರೆ ಅವನು ಲಾಂಗ್ ಟರ್ಮ್ ಮೆಮೊರಿ ಅನ್ನು ಕಳೆದು ಕೊಂಡನು ಜೊತೆಗೆ ಹಿಂದೆ ಅವನು ಹೊಂದಿದ್ದ ಎಲ್ಲಾ ಮೆಮೊರಿ ಅನ್ನು ಅವನು ಕಳೆದು ಕೊಂಡನು ಮತ್ತು  ಹೊಸದನ್ನು  ರೂಪಿಸಲು ಆಗುವುದಿಲ್ಲ 
ಹಿಂದಿನ ದಿನದ ಎಲ್ಲಾ ಕಾರ್ಯಗಳನ್ನು ಅವನು ಮರೆತು ಹೋಗುತ್ತಿದ್ದನು 
ಊಟ ಮಾಡುವುದು ಹೇಗೆ ಎಂಬುದನ್ನು ಕೂಡ ಮರೆತು ಹೋಗಿತಿದ್ದನು  ಹೀಗಾಗಿ ವಿಲಿಯಂ ಸ್ಕೋವಿಲ್ಲೆ ಅವರು ಮಿದುಳಿನ ಮೆಮೊರಿ  ಎಕ್ಸ್ಪರ್ಟ್ ಆದ  ವೈಲ್ಡರ್ ಪೆನ್ಫೀಲ್ಡ್ ಬಳಿಗೆ ಈ ಪೇಷಂಟ್ ಅನ್ನು ಕಳುಹಿಸುತ್ತಾರೆ ಹೀಗಾಗಿ ಅವರು ಪಿಎಚ್ಡಿ
ಸ್ಟೂಡೆಂಟ್ ಆದ ಬ್ರೆಂಡಾ ಮಿಲ್ನರ್ ಎಂಬ ಹುಡುಗಿಯನ್ನು ಅವರ ಮನೆಗೆ ಕಳುಹಿಸುತ್ತಾರೆ ಅವಳು ದಿನನಿತ್ಯ ಅವರ ಜೊತೆಗೆ ಇದ್ದು ಪೇಷಂಟ್ ನ ಆಲೋಚನೆ ಮತ್ತು ವರ್ತನೆಗಳನ್ನು ಅಧ್ಯಯನ ಮಾಡುತ್ತಾಳೆ ಆ ಪೇಷಂಟ್ ಒಂದು ಸಾಲನ್ನು ಓದಿ ಮುಗಿಸಲು ಅದಿನೈದು ನಿಮಿಷ ತೆಗೆದುಕೊಳ್ಳುತ್ತಿದ್ದ 
ಹಾಗೆ ಒಂದು ನಂಬರ್ ಅನ್ನು ನೆನಪಿಟ್ಟುಕೊಳ್ಳಲು ಅವಳು ಯಾವುದೋ ಒಂದು ನಂಬರ್ ಅನ್ನು ಕೊಡುತ್ತಿದ್ದಳು ಆಗ ಅವನು ಅದನ್ನು ಸಹ ಅದಿನೈದು ನಿಮಿಷಗಳ ಕಾಲ ಮಾತ್ರ ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದರು
ಆದ್ರೆ ಕೇವಲ ಐದು ನಿಮಿಷದ ನಂತರ ಮಾಡಿದ ಎಲ್ಲಾ ಟೆಸ್ಟ್ ಗಳನ್ನು ಮರೆತು ಹೋಗುತ್ತಿದ್ದನು 
ಹೀಗೆ ಮೆದುಳಿನ ಮೆಮೊರಿ ಮೇಲೆ ಅಧ್ಯಯನ ನಡೆಯುತ್ತಾ ಬರುತ್ತದೆ ಕೊನೆಗೆ ಮೆಮೊರಿ ಅನ್ನುವುದು ಮೆದುಳಿನ ಎಲ್ಲಾ ಭಾಗಗಳ ಮೂಲಕ ಮತ್ತು ಹಲವಾರು ಸ್ಟೆಪ್ ಗಳ ಮೂಲಕ ಮೆಮೊರಿ ಸ್ಟೋರ್ ಆಗುವುದು ಗೊತ್ತಾಗುತ್ತದೆ 
ಹೇಗೆಂದರೆ ನಾವು ಯಾವುದಾದರೂ ಒಂದು ಹೊಸ ಕೆಲಸ ಮಾಡಿದಾಗ ಅದು     ಮೆದುಳಿನ ಕಾರ್ಟೆಕ್ಸ್ ಅಲ್ಲಿ ಟೆಂಪ್ರವರಿ ಆಗಿ ಕೂರುತ್ತದೆ ನಂತರ ಅದು ಮೆದುಳಿನ ಹಿಪ್ಪೊಕ್ಯಾಂಪಸ್ ಆಲ್ಲಿ ಹೋಗುತ್ತದೆ ಇದರಲ್ಲಿ ಸ್ಪೇಸಿಯಲ್  ಪ್ರೊಟೀನ್ ಗಳು ಮೆದುಳಿನ ಎಲ್ಲಾ ಕನೆಕ್ಷನ್ ಗಳಿಂದ ಮಾಹಿತಿ ಪಡೆದು ಆ ಕೆಲಸದ ಅನುಭವವನ್ನು ಸ್ಟ್ರಾಂಗ್ ಮಾಡುತ್ತವೆ ಇದೆ ಕೆಲಸ ಅಥವಾ ಭಾಷೆ ಕಲಿಯುವಿಕೆ ಮತ್ತೆ ಕೆಲವೇ ದಿನಗಳಲ್ಲಿ ಮತ್ತೆ ರಿಪೀಟ್ ಆದ್ರೆ ಆ ವಿಷಯವನ್ನು ಮತ್ತೆ ಮಿದುಳಿನ ಕಾರ್ಟೆಕ್ಸ್ ಗೆ ಪರ್ಮನೆಂಟ್ ಮೆಮೊರಿ ಆಗಿ ಕಳಿಸುತ್ತದೆ ಹೀಗೆ ಒಂದು ಲಾಂಗ್ ಟರ್ಮ್ ಮೆಮೊರಿ ಕ್ರಿಯೇಟ್ ಆಗುತ್ತೆ 
ಹೀಗೆ ಏಚ್ ಎಂ ನ ಬ್ರೈನ್ ಆರಂಭಿಕ ನೆನಪುಗಳ ಬಗ್ಗೆ ಮತ್ತು ಆರಂಭಿಕ ಸಂಗತಿಗಳ ಬಗ್ಗೆ ಮಾತ್ರ ಯೋಚಿಸಲು ಮತ್ತು ಅದರ ಬಗ್ಗೆ ಮಾತನಾಡಲು ಸಾದ್ಯ ಆದರೆ ಹಿಪ್ಪೋಕ್ಯಾಂಪಾಸ್ ಅನ್ನು  ತೆಗೆದು ಹಾಕಿರುವುದರಿಂದ  ಹಿಪ್ಪಾಕ್ಯಾಂಪಸ್  ಇಲ್ಲದೆ ಅವುಗಳನ್ನು ಹೆಚ್ಚಿನ ಕಾಲ ನೆನಪಿಡಲು ಸಾದ್ಯ ಇರುವುದಿಲ್ಲ  ಯಾಕಂದ್ರೆ ಎಲ್ಲಾ ಯೋಚನೆಗಳು ಮತ್ತು ಕ್ರಿಯೆಗಳು ಈ ಹಿಪ್ಪಾಕ್ಯಾಂಪಸ್ ಅಲ್ಲೇ ಬಲವರ್ಧನೆ ಆಗೋದು 
ಹೀಗಾಗಿ ಏಚ್ ಎಂ ನ ಕ್ರಿಯೆಗಳು ಯೋಚನೆಗಳು ಮರುಳಿನ ಬರೆದ ಅಕ್ಷರಗಳ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು 
ಇದಲ್ಲದೆ ಅವಳು ಇನ್ನೊಂದು ಎಕ್ಸ್ಪರಿಮೇಂಟ್ ಅನ್ನು ಮಾಡುತ್ತಾಳೆ ಎರೆಡು ನಕ್ಷತ್ರಗಳ ಮದ್ಯೆ ನಕ್ಷತ್ರವನ್ನು ಬಿಡಿಸುವಂತೆ ಹೇಳುತ್ತಾಳೆ ಆದ್ರೆ ಕನಡಿಯಲ್ಲಿ ನೋಡಿಕೊಂಡು ಬಿಡಿಸುವಂತೆ ಹೇಳುತ್ತಾಳೆ ಆಗ ಏಚ್ ಎಂ ಮೊದಲ ಬಾರಿಗೆ ಅದನ್ನು ತುಂಬಾ ನಿಧಾನವಾಗಿ ಮತ್ತು ದೊಡ್ಡ ಕೆಲಸವೆಂಬಂತೆ  ತಡವರಿಸುತ್ತಾ ಮಾಡುತ್ತಾನೆ ಮೊದಲನೇ ಬಾರಿ ಕರೆಕ್ಟ್ ಚಿತ್ರ ಬರುವುದಿಲ್ಲ ಆದ್ರೆ ಐದಾರು ಬಾರಿ ಅದೇ ರೀತಿ ಪ್ರಾಕ್ಟೀಸ್ ಮಾಡಿದ ನಂತರ ಹಿಂದಿನ ನೆನಪು ಇಲ್ಲದಿಂದರು ಸಹ  ಆ ಚಿತ್ರವನ್ನು ಕರೆಕ್ಟ್ ಆಗಿ ಬಿಡಿಸುತ್ತಾನೆ ಯಾಕಂದ್ರೆ ಅವನ ಸಬ್ ಕಾನ್ಸಿಯಸ್ ಮೈಂಡ್ ಅವನು ಮರೆತಿರುವುದನ್ನ ನೆನಪಿಸುತ್ತದೆ ಆದ್ರೆ ಅವನು ಹೀಗೆ ನೆನಪಿಸಿಕೊಂಡು ಹೇಳಿದ್ದು  ಹೆಸರುಗಳನ್ನ ಮತ್ತು ದಿನಾಂಕಗಳನ್ನು ಆದ್ರೆ ಇದು ಯಾವುದಾದರೂ ವಾಹನ ಓಡಿಸುವ ಮತ್ತು ಸೈನ್  ಮಾಡುವ ಕಾರ್ಯಗಳ ಮೆಮರಿಯಿಂದ ಬಿನ್ನವಾಗಿದೆ ಇಂತಹ ಕಾರ್ಯ ವಿಧಾನಗಳ ಮೆಮೊರಿ ಹೆಚ್ಚಾಗಿ ಮೆದುಳಿನ ಸೇರಬೆಲ್ಲಂ ಮತ್ತು ಗ್ಯಾಂಗ್ಲಿಯಾ ಎಂಬ ಭಾಗಗಳಿಂದ ರಚಿತವಾಗುತ್ತೇ 
ಹೀಗೆ ಮೆದುಳಿನ ಮೇಲೆ ಮಾಡಿದ ಈ ಸಂಶೋಧನೆ ಮುಂದೆ ಮೆಮೊರಿ ಮೇಲೆ ಅಧ್ಯಯನ ಮಾಡುವವರಿಗೆ ಸಹಾಯ ಮಾಡುತ್ತದೆ 
ಆಮೇಲೆ ಏಚ್ ಎಂ ಅವರು ಪ್ರಶಾಂತವಾದ ಜೀವನ ಕಳೆದ ನಂತರ  ತಮ್ಮ 82 ನೆ ವಯಸ್ಸಿನಲ್ಲಿ ಮರಣ ಹೊಂದುತ್ತಾರೆ ತದನಂತರ ನೂರಕ್ಕೂ ಹೆಚ್ಚು ನರವಿಜ್ಞಾನಿಗಳು ಆತನ ಮೆದುಳನ್ನು ಅಧ್ಯಯನ ಮಾಡುತ್ತಾರೆ ಹಾಗೆಯೇ ಆತನ ಮೆದುಳನ್ನು ಡಿಜಿಟಲ್ ಆಗಿ ಸ್ಕ್ಯಾನ್ ಮಾಡಿ ಫೋಟೋ ತಯಾರಿಸಿದ ನಂತರ ಎರೆಡು ಸಾವಿರ ಪಿಸಸ್ ಆಗಿ ಭಾಗ ಮಾಡುತ್ತಾರೆ ಇವೆಲ್ಲವನ್ನೂ ಫೋಟೋ ತೆಗೆದು ಒಂದು ಮ್ಯಾಪ್ ರೀತಿ ತಯಾರಿಸಿ ಇಡುತ್ತಾರೆ ಇದನ್ನು ಸುಮಾರು ನಾಲ್ಕು ಲಕ್ಷ ಜನರು ವೀಕ್ಷಿಸುತ್ತಾರೆ 



ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!