lampi skin Disease coasus ಜಾನುವಾರುಗಳಿಗೆ ಈ ಖಾಯಿಲೆ ಹೇಗೆ ಬರುತ್ತೆ ಇದರ ಹಾಲು ಕುಡಿಯಬಹುದ
ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ
1.ಜಾನುವಾರುಗಳಿಗೆ ಈ ಖಾಯಿಲೆ ಹೇಗೆ ಬಂತು
2.ಇದರ ಲಕ್ಷಣಗಳು ಏನು
3. ಈ ಖಾಯಿಲೆ ಬಂದ ಹಸುವಿನ ಹಾಲು ಕುಡಿದರೆ ಏನಾಗುತ್ತೆ
4. ಇದು ಹೇಗೆ ಬರುತ್ತೆ ಮತ್ತು ಬರದಂತೆ ಹೇಗೆ ತಡೆಯಬಹುದು
ಎಂಬ ವಿಷಯಗಳ ಬಗ್ಗೆ ವಿವರಿಸಲಾಗಿದೆ
1. ಈ ಕಾಯಿಲೆ ಹೇಗೆ ಬಂತು
ಈ ಕಾಯಿಲೆ ಸಾವಿರದ ಒಂಬೈನುರ
ಇಪ್ಪೋತ್ರಾಂಬತ್ತಲ್ಲಿ ಜಾಂಬಿಯ ಎಂಬ ದೇಶದಲ್ಲಿ ಮೊದಲು ಬಂತು ನಂತರ ಈ ಕಡೆ ಏಷ್ಯಾದ ಬಾಂಗ್ಲಾದೇಶದಲ್ಲಿ ಎರೆಡು ಸಾವಿರದ ಅತ್ತೊಂಬೋತ್ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು ತದನಂತರ ಅದೇ ವರ್ಷದ ಆಗಸ್ಟ್ ತಿಂಗಳಲ್ಲಿ ಇದು ಭಾರತಕ್ಕೆ ಹೇಗೆ ಬಂತು ಎಂದು ತನಿಖೆ ಮಾಡಿದಾಗ ಬಾಂಗ್ಲಾದೇಶ ಮತ್ತು ಭಾರತದ ಗಡಿಯ ಭಾಗದಲ್ಲಿ ಅಕ್ರಮವಾಗಿ ಜಾನುವಾರುಗಳ ಮಾರಾಟದಿಂದ ಬಂದಿರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ
2. ಇದರ ಲಕ್ಷಣಗಳು ಏನು
ಮೊದಲಿಗೆ ತಿರ್ವ ಜ್ವರ ಉಂಟಾಗುತ್ತದೆ ಮತ್ತು ಕಮ್ಮಿ ಹಾಲನ್ನು ಕೊಡ್ತವೆ
ಕಣ್ಣು ಮೂಗಲ್ಲಿ ನೀರು ಶ್ವಾಸಕೋಶಕ್ಕೆ ಇರುತ್ತದೆ ಬಾಯಲ್ಲಿ ಜೊಲ್ಲು ಜಾಸ್ತಿ ಇರುತ್ತೆ ಜಾನುವಾರುಗಳಿಗೆ ಹಸಿವು ಕಮ್ಮಿ ಆಗುತ್ತೆ ಸರಿಯಾಗಿ ಮೇವು ತಿನ್ನಲ್ಲ ನಂತರ ಚರ್ಮ ಗಾಯಗಳಾಗಿ ಮಾರ್ಪಾಡಾಗುತ್ತದೆ ಕಿನ್ನತೆಗೆ ಒಳಗಾದಂತೆ ಬಿಹೇವ್ ಮಾಡ್ತವೆ ದೇಹ ಸಣ್ಣ ಆಗೋದು ಬಂಜೆತನ ಕಾಡುತ್ತೆ ಗರ್ಭ ಪಾತವು ಆಗಬಹುದು ಒಂದು ವೇಳೆ ಗರ್ಭ ಧರಿಸಿದರೆ. ಈ ಖಾಯಿಲೆ ತಗುಲಿ ಆ ಕಾಯಿಲೆ ಗೊತ್ತಾಗೊಕೆ ಇಪ್ಪಂತೆಂಟು ದಿನಗಳು ಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ
3. ಈ ಖಾಯಿಲೆ ಬಂದ ಹಸುವಿನ ಹಾಲು ಕುಡಿದರೆ ಏನಾಗುತ್ತೆ
ಸಂಶೋಧನೆ ನಡೆಸಿದ ವೈದ್ಯರು ಮತ್ತು ತಜ್ಞರು ಹೇಳುವ ಪ್ರಕಾರ ಹಾಲಲ್ಲಿ ಯಾವುದೇ ಕಾರಣಕ್ಕೂ ಈ ವೈರಸ್ ಇರುವುದಿಲ್ಲ ಹಾಲು ಕುಡಿಯುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದ್ದಾರೆ ಜೊತೆಗೆ ಈ ವೈರಸ್ ನಿಂದಾ ಮಾನವರಿಗೆ ಕಾಯಿಲೆ ಹರಡುವುದಿಲ್ಲ ಎಂದು ತಿಳಿಸಿದ್ದಾರೆ
4. ಇದು ಹೇಗೆ ಬರುತ್ತೆ ಮತ್ತು ಬರದಂತೆ ಯಾವೆಲ್ಲ ಮಾರ್ಗಗಳ ಇವೆ ?
ಇದು ಲಂಪಿ ಸ್ಕಿನ್ ಡಿಸಿಸ್ ಕ್ಯಾಪ್ರಿ ಪಾಕ್ಸ್ ಎಂಬ ವೈರಸ್ ನಿಂದಾ ಬರುತ್ತೆ
ಈ ಕಾಯಿಲೆ ಬಂದ ಹಸುವಿನ ಮೇಲೆ ಕೂತು ಹೋಗುವ ಸೊಳ್ಳೆ ನೊಣ ಹುಣ್ಣೆ ಗಳ ಮೂಲಕ ಹರಡುತ್ತದೆ ಮತ್ತು ಬಾಯಲ್ಲಿ ಮೂಗಿನಲ್ಲಿ ಬರುವ ಜೊಲ್ಲಿನಲ್ಲಿ ಈ ವೈರಾಣು ಇರುತ್ತೆ ಇದರಿಂದ ಅವು ತಿನ್ನುವ ಮೇವಿನಿಂದ ಕೂಡ ಪಕ್ಕದಲ್ಲಿ ಇರುವ ಹಸುವಿಗು ಇದು ಬರಬಹುದು ಎಂದು ಹೇಳುತ್ತಾರೆ
ಹಾಗಾಗಿ ಈ ಖಾಯಿಲೆ ಬರದಂತೆ ಆದಷ್ಟು ಈ ಕಾಯಿಲೆಯ ಲಕ್ಷಣ ಇರುವ ಜಾನುವಾರುಗಳನ್ನು ಹುಡುಕಿ ಕ್ವಾರಂಟೈನ್ ಹಾಕುವ ಜೊತೆಗೆ ಅವುಗಳಿಗೆ ವ್ಯಾಕ್ಸೀನ್ ಹಾಕಬೇಕು ಎಂದು ತಜ್ಞರು ಸ್ಟ್ರಿಕ್ಟ್ ಆಗಿ ಹೇಳಿದ್ದಾರೆ ಆದ್ರೆ ಎಲ್ಲಾ ಬೇಜವಾಬ್ದಾರಿ ತೋರಿಸುವ ಜನರೇ ಜಾಸ್ತಿ ಇದ್ದಾರೆ ಅದು ಅಲ್ಲದೆ ಜಾನುವಾರುಗಳ ಓಡಾಟ ಮಾರಾಟದ ಬಗ್ಗೆ ನಿಗಾ ವಹಿಸಬೇಕು ಅವುಗಳ ಕೊಟ್ಟಿಗೆ ಕ್ಲೀನ್ ಆಗಿ ಇಡಬೇಕು ಸೊಳ್ಳೆ ನೊಣ ಹುಣ್ಣೆ ಗಳು ಬರದಂತೆ ನೋಡಿಕೊಳ್ಳಬೇಕು ಇನ್ನು ಇದಕ್ಕೆ ಸದ್ಯಕ್ಕೆ ಇರುವ ಲಸಿಕೆ ಎಂದರೆ ಗೋಟ್ ಪಾಕ್ಸ್ ವ್ಯಾಕ್ಸೀನ್ ಇದಕ್ಕೆ ಸರಿಯಾದ ಲಸಿಕೆ ಎಂದು ಹೇಳಿದ್ದಾರೆ ಮತ್ತು ಇನ್ನೂ ಈ ಖಾಯಿಲೆಗೆ ಸ್ವದೇಶಿ ಲಸಿಕೆ ಕಂಡು ಹಿಡಿಯುತ್ತಾ ಇದ್ದಾರೆ ಆದ್ರೆ ಇದಕ್ಕೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಅಂತ ಯಾವುದು ಇಲ್ಲ ಹಾಗಾಗಿ ಮೊದಲೇ ಇದು ಬರದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ ವಾಗಿದೆ ಇದು ಈಗಾಗಲೇ ತುಂಬಾ ಕಡೆ ಸ್ಪ್ರೆಡ್ ಕೂಡ ಆಗ್ತಾ ಇದೆ ಸೋ ಮೊದಲೇ ಜಾಗೃತ ಗೊಳ್ಳುವುದು ತುಂಬಾ ಪರಿಣಾಮಕಾರಿಯಾಗಿ ಇರುತ್ತೆ ಅಂತ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ