how work the hormone in kannada

ಹಾಯ್ ಮೈ ಡಿಯರ್ ಫ್ರೆಂಡ್ಸ್ ಈ ವಿಡಿಯೋದಲ್ಲಿ ನಮ್ಮ ದೇಹದಲ್ಲಿ ಹಾರ್ಮೋನ್ ಗಳು ಹೇಗೆ ವರ್ಕ್ ಮಾಡುತ್ತವೆ ಎಂದು ವಿವರಿಸಲಾಗಿದೆ 
ನಮ್ಮ ದೇಹ ಹುಟ್ಟಿನಿಂದ ಸಾಯುವ ವರೆಗೂ ನಾನಾ ರೀತಿಯ ಹಂತಗಳನ್ನು ದಾಟಿ ಹೋಗುತ್ತದೆ ಅಂದ್ರೆ ನಾವು ಬೆಳೆಯುವುದು, ಪ್ರೌಡಾವಸ್ತೆ ತಲುಪುವುದು ಮತ್ತು ಮಗು ಪಡೆಯಲು ಇವೆಲ್ಲಾ ಬದಲಾವಣೆಗಳಿಗೆ ಈ ಹಾರ್ಮೋನ್ ಗಳೆ ಕಾರಣ.
ನಮ್ಮ ದೇಹದ ಹಾರ್ಮೋನ್ ಬಿಡುಗಡೆಗೆ ಸಂಬಂಧಿಸಿದ ಎಂಡೊಕ್ರೈನ್ ಎಂಬ ಒಂದು ಸಿಸ್ಟಂ ನಮಗೆ ಗೊತ್ತಿಲ್ಲದೆ ಅದರ ಕೆಲಸ ಮಾಡುತ್ತಿರುತ್ತದೆ .
ಈ ಸಿಸ್ಟಂ ನೀವು ನಿದ್ದೆ ಮಾಡುವುದರಿಂದ ಇಡಿದು ನಿಮ್ಮ ಹಾರ್ಟ್ ಬೀಟ್ ನ ವರೆಗೂ ಎಲ್ಲವನ್ನೂ ಕಂಟ್ರೋಲ್ ಮಾಡುತ್ತದೆ ಈ ಹಾರ್ಮೋನ್ ಸಿಸ್ಟಂ ದೇಹದ ಎಲ್ಲಾ ಜೀವಕೋಶಗಳ ಮೇಲೆ ತನ್ನ ಪ್ರಭಾವ ಬೀರಲು ಶ್ರಮಿಸುತ್ತಿರುತ್ತದೆ ಇದು ದೇಹದ ಮೂರು ವಸ್ತುಗಳ ನಡುವೆ ನಡೆಯುತ್ತದೆ ಅವುಗಳೆಂದರೆ ಹಾರ್ಮೋನ್ ಅನ್ನು ಬಿಡುಗಡೆ ಮಾಡುವ ಗ್ರಂಥಿಗಳು, ಹಾರ್ಮೋನ್ ಗಳು ಮತ್ತು ಹಾರ್ಮೋನ್ ಅನ್ನು ಹೀರಿಕೊಳ್ಳುವ ಅಥವಾ ರಿಸೀವ್ ಮಾಡಿಕೊಳ್ಳುವ ಜೀವಕೋಶಗಳು.
ಈ ಹಾರ್ಮೋನ್ ಬಿಡುಗಡೆ ಮಾಡುವ ಗ್ರಂಥಿಗಳು 3 ಮಿದುಳಿನಲ್ಲಿ ಇದ್ದರೆ ಇನ್ನ 
7 ಗ್ರಂಥಿಗಳು ದೇಹದ ವಿವಿಧ ಭಾಗದಲ್ಲಿ ಇರುತ್ತವೆ ರಕ್ತನಾಳಗಳು ಈ ಎಲ್ಲಾ ಗ್ರಂಥಿಗಳನ್ನ ಸುತ್ತುವರೆದಿರು ತ್ತವೆ
ಈ ಸುತ್ತುವರೆದಿರುವ ರಕ್ತನಾಳಗಳು ಈ ಗ್ರಂಥಿಗಳಿಗೆ ಹಾರ್ಮೋನ್ ಉತ್ಪಾದನೆ ಮಾಡಲು ಬೇಕಾಗಿರುವ ನ್ಯೂಟ್ರಿಷನ್ ಪ್ರೊಟೀನ್ ಮತ್ತು ಇತರೆ ಪೌಷ್ಟಿಕಾಂಶ ಹೊದಗಿಸುತ್ತವೆ ನಂತರ ಈ ಗ್ರಂಥಿಗಳು ಸಲ್ಪ ಅಮೌಂಟ ನಶ್ಟು ಹಾರ್ಮೋನ್ ಅನ್ನು ಈ ರಕ್ತನಾಳದ ಹೊಳಗೆ ಬಿಡುತ್ತವೆ ರಕ್ತನಾಳದ ಒಳಗೆ ಬಂದ ಹಾರ್ಮೋನ್ ತಾನು ಸೇರಬೇಕಾದ ಅಥವಾ ತನ್ನನ್ನು ರಿಸೀವ್ ಮಾಡಿಕೊಳ್ಳುವ ಜೀವಕೋಶಗಳನ್ನು ತಲುಪಲು ರಕ್ತದ ಮೂಲಕ ದೇಹದ ತುಂಬಾ ಸಂಚರಿಸುತ್ತದೆ ಹೀಗೆ ಹಾರ್ಮೋನ್ ಅನ್ನು ರಿಸೀವ್ ಮಾಡಿಕೊಳ್ಳುವ ಜೀವಕೋಶಗಳು ಮತ್ತು ಹಾರ್ಮೋನ್ ಗಳು ಎರೆಡು ವಿಶಿಷ್ಟ ರೀತಿಯ ಪ್ರೊಟೀನ್ ಅನ್ನು ಹೊಂದಿರುತ್ತವೆ ಇವು ಅವುಗಳಿಗೆ ಕೊಡ್ ಇದ್ದಂತೆ ನಂತರ ಇವೆರೆಡೂ ಸೇರಿದ ನಂತರ ಆ ಜೀವಕೋಶದ ಕೆಲಸದಲ್ಲಿ ಬದಲಾವಣೆ ಆಗುತ್ತದೆ ಅಂದ್ರೆ ಅದು ಮಾಡುವ ಕೆಲಸ ಹೆಚ್ಚು ಆಗಬಹುದು ಅಥವಾ ಕಡಿಮೆ ಆಗಬಹುದು ಮತ್ತು ಜೀವಕೋಶದ ವರ್ತನೆ ಬದಲಾಗುತ್ತದೆ 
ಹೀಗೆ ಒಂದೇ ಬಾರಿಗೆ ಟ್ರಿಲಿಯನ್ ಜಿವೋಕೋಷಗಳು ತನ್ನ ವರ್ತನೆ ಯನ್ಮ ಬದಲಾವಣೆ ಮಾಡಿಕೊಳ್ಳುತ್ತವೆ ಮತ್ತೆ ಹಾರ್ಮೋನ್ ಗಳು ತನ್ನ ಕ್ವಾಂಟಿಟಿ ಅನ್ನ ಕೇರ್ಫುಲ್ ಆಗಿ ಕಂಟ್ರೋಲ್ ಮಾಡುತ್ತವೆ 
ಎಂಡೋಕ್ರೋನಿಕ್ ಎನ್ನುವ ದೇಹದ ಚಟುವಟಿಕೆ ನಿಯಂತ್ರಿಸಲು ಇರುವ ಹಾರ್ಮೋನ್ ಸಿಸ್ಟಂ ದೇಹದಲ್ಲಿ ತುಂಬಾ ದೊಡ್ಡದಾದ ಬದಲಾವಣೆ ಮಾಡುತ್ತದೆ ಮೊದಲನೇ ಪ್ಲೇಸ್ ಅಲ್ಲಿರುವ ಗ್ರಂಥಿ ಯಾದ ಥೈರಾಯಿಡ್ ಗ್ರಂಥಿ ಟ್ರೈಯೋಡೋಥೈರೋನೈನ್ ಮತ್ತು ಥೈರಾಕ್ಸಿನ್ ಎಂಬ ಎರೆಡು ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ 
ಇವು ಉಸಿರಾಟ,ಹಾರ್ಟ್ ಬ್ರೀತಿಂಗ್, ದೇಹದ ಟೆಂಪರೇಚರ್ ಮತ್ತು ಜೀರ್ಣಕ್ರಿಯೆಯನ್ನು ಕಂಟ್ರೋಲ್ ಮಾಡುತ್ತವೆ ಹಾಗೆ ಕೆಲವು ಹಾರ್ಮೋನ್ ಗಳು ನಮ್ಮ ಪ್ರೌಡಾವಸ್ತೆ ಯಲ್ಲಿ ನಮಗೆ ಕಾಣುವ ಬದಲಾವಣೆ ಮಾಡುತ್ತವೆ ಪುರುಷರಲ್ಲಿ ವೃಷಣ ವೀರ್ಯಾಣು ಗಳನ್ನ ಉತ್ಪಾದನೆ ಮಾಡುತ್ತದೆ ಇದು ಸೆಕ್ಸ್ ಗೆ ಸಂಭಂದ ಪಟ್ಟ ಅಂಗಾಂಶಗಳ ಬೆಳೆವಣಿಗೆಗೆ ಕಾರಣ ಆಗುತ್ತೆ ಹಾಗೆ ಮುಖದಲ್ಲಿ ಕೂದಲು ಬೆಳೆಯುವುದು ಹಾಗೂ ವಾಯ್ಸ್ ಚೇಂಜ್ ಆಗುವುದು ಹೈಟ್ ಇಂಕ್ರಿಸ್ ಆಗುವುದು ಹುಡುಗಿಯರಲ್ಲಿ 
ಈಸ್ಟ್ರೊಜೆನ್ ಹಾರ್ಮೋನ್ ಉತ್ಪತ್ತಿ ಆಗುತ್ತೆ ಅಂಡಾಶಯದಲ್ಲಿ ಅಂಡಾಣುಗಳ ಉತ್ಪತ್ತಿ ಆಗಲು ಕಾರಣ ಆಗುತ್ತೆ ಹಾಗೆ ದೇಹದ ಬೆಳವಣಿಗೆಗೆ ಕೂಡ ಕಾರಣ
 ಆಗುತ್ತೆ ಹಾಗೆ ಹಿಪ್ ಅಗಲ ಆಗೋದು ಗರ್ಭಾಶಯ ಪದರ ದಪ್ಪ ಆಗೋದು ಹೀಗೆ ಇದು 50 ವರ್ಷ ಆದ ನಂತರ ಮುಟ್ಟು ಆಗೋದು ನಿಲ್ಲುವ ಮೂಲಕ ಎಂಡ್ ಆಗುತ್ತೆ ಹೀಗೆ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮತ್ತು ಮಹಿಳೆಯರಲ್ಲಿ ಈಸ್ಟ್ರೊಜೆನ್ ಉತ್ಪತ್ತಿ ಆಗಿ ಸೆಕ್ಸ್ ಅಂಗಾಶಗಳನ್ನು ಬೆಳೆಸುತ್ತವೆ 
ನಂತರ ಗರ್ಭ ಬೆಳೆಯುವ ಸಂದರ್ಭದಲ್ಲಿ 10 ಕ್ಕಿಂತ ಹೆಚ್ಚು ಹಾರ್ಮೋನ್ ಗಳು ಗರ್ಭ ಬೆಳೆಯಲು ಸಹಾಯ ಮಾಡುತ್ತವೆ 
ಪಿರಿಯಡ್ ನಲ್ಲಿ ಕೆಲವೊಂದು ಹಾರ್ಮೋನ್ ಗಳು ಕಾರ್ಯ ನಿರ್ವಹಿಸುವುದರಿಂದ ಸಂತೋಷಕ್ಕೆ ಕಾರಣ ಆಗುವ ಸೆರೋಟೋನಿನ್ ಹಾರ್ಮೋನ್ ಕಡಿಮೆ ಆಗುತ್ತೆ ಸೋ ಹೀಗಾಗಿ ಪೀರಿಯಡ್ ನಲ್ಲಿ ಒಂಥರಾ ಮೂಡ್ ಚೇಂಜ್ ಆಗುತ್ತೆ ಆದ್ರೆ ಹಾರ್ಮೋನ್ ಗಳು ನಮಗಿಂತ ಪವರ್ ಫುಲ್ ಆಗಿ ನಮ್ಮ ಮೂಡ್ ಅನ್ನು ಕಂಟ್ರೋಲ್ ಮಾಡುತ್ತವೆ ಎಂದು ಹೇಳಲು ಆಗುವುದಿಲ್ಲ ಮೇಲಿಂದ ನೋಡಿದರೆ ಇವೆ ನಮ್ಮನ್ನು ಮುನ್ನಡೆಸುತ್ತದೆ ಎಂದು ಕಾಣುತ್ತದೆ ಹಾಗೆಯೇ ನಮ್ಮ ಪ್ರೌಡಾವಸ್ಟೆಯಲ್ಲಿ ನಮ್ಮನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳುತ್ತವೆ ಸಂಶೋಧಕರು ಹೇಳುವಂತೆ ಇವು ತಮ್ಮ ಕೆಲಸ ಮಾಡುತ್ತವೆ ಅಷ್ಟೇ ನಮ್ಮನ್ನು ಕಂಟ್ರೋಲ್ ಮಾಡುವುದಿಲ್ಲ ಎಂದು ಹೇಳುತ್ತಾರೆ 
ಕೆಲವೊಂದು ಸಲ ರೋಗಗಳನ್ನು ತರಬಹುದು,ಮತ್ತೆ ಒತ್ತಡ ಉಂಟುಮಾಡಬಹುದು ಕೆಲವೊಂದು ಸಲ ನಾವು ತೆಗೆದುಕೊಳ್ಳುವ ಆಹಾರ ಈ ಹಾರ್ಮೋನ್ ಉತ್ಪಾದನೆ ಆಗುವ ಪ್ರಮಾಣ ಮತ್ತು ರಿಸೀವ್ ಮಾಡಿಕೊಳ್ಳುವ ಜೀವಕೋಶಗಳಲ್ಲಿನ ಬದಲಾವಣೆಗೆ ಕಾರಣ ಆಗಬಹುದು 
ಡೈಯಾಬಿಟಿಸ್ ಒಂದು ಪ್ರಮುಖವಾದ ಹಾರ್ಮೋನ್ ಡಿಸಾರ್ಡರ್ ಆಗಿದೆ ಇದು ಮೇದೋಜೀರಕ ಗ್ರಂಥಿ ಯಾವಾಗ ಇನ್ಸುಲಿನ್ ಅನ್ನು ತುಂಬಾ ಕಡಿಮೆ ಬಿಡುಗಡೆ ಮಾಡುತ್ತದೆಯೋ ಆಗ ಡೈಯಾಬಿಟಿಸ್ ಉತ್ಪತ್ತಿ ಆಗುತ್ತೆ ಈ ಹಾರ್ಮೋನ್ ಬ್ಲಡ್ ನ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಮಾಡುತ್ತಿರುತ್ತದೆ 
ಹಾಗೆ ನಮ್ಮ ಗಂಟಲಿನ ಹತ್ತಿರ ಇರುವ ಥೈರಾಯಿಡ್ ಗ್ರಂಥಿ ತುಂಬಾ ಕಡಿಮೆ ಹಾರ್ಮೋನ್ ಬಿಡುಗಡೆ ಮಾಡಿದ್ರೆ ಹಾರ್ಟ್ ರೆಟ್ ತುಂಬಾ ಕಡಿಮೆ ಆಗೋದು ಆಯಾಸ ಆಗೋದು ಒತ್ತಡ ಆಗೋದು ಆಗುತ್ತದೆ ಹಾಗೆ ಈ ಹಾರ್ಮೋನ್ ತುಂಬಾ ಹೆಚ್ಚಾದರೆ ತೂಕ ಕಡಿಮೆ ಆಗೋದು ನಿದ್ರೆ ಬಾರದೆ ಇರುವುದು ಕೋಪ ಬರುವುದು ಆಗುತ್ತದೆ ಆದ್ರೆ ಮೋಸ್ಟ್ ಆಫ್ ದಿ ಟೈಮ್ ನಮ್ಮ ದೇಹದ ಈ ಎಂಡೋಕ್ರೋನಿಕ್ ಹಾರ್ಮೋನ್ ಸಿಸ್ಟಂ 
ನಮ್ಮ ದೇಹ ಸರಿಯಾಗಿ ಕಾರ್ಯ ನರ್ವಹಿಸುವಂತೆ ಮಾಡುತ್ತದೆ 
ನಮ್ಮ ದೇಹದಲ್ಲಿ ಹಾರ್ಮೋನ್ ಚೇಂಜ್ ಮಾಡುವ ಬದಲಾವಣೆಗಳು ಕೊನೆಗೆ ನಾವು ಯಾರು ಎಂಬುದನ್ನು ತಿಳಿಯಲು ಸಹಾಯ ಮಾಗಿತ್ತವೆ 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

how make karpur in kannada karpur business in kannada

ಟೆಂಟ್ ಹೌಸ್ ಬಿಸಿನೆಸ್ ಪ್ಲಾನ್

ಕಾಪಿ ಕುಡಿದಾಗ ಮೈಂಡ್ ಅಲ್ಲಿ ಆಗುವ ಬದಲಾವಣೆಗಳು..,!